Home » ಲೈವ್ ನ್ಯೂಸ್ » ತಹಶೀಲ್ದಾರ ರವರ ಮುಖಾಂತರ ಮಾನ್ಯ ಜಿಲ್ಲಾಧೀಕಾರಿಗಳಿಗೆ

ತಹಶೀಲ್ದಾರ ರವರ ಮುಖಾಂತರ ಮಾನ್ಯ ಜಿಲ್ಲಾಧೀಕಾರಿಗಳಿಗೆ

Facebook
X
WhatsApp
Telegram

ಔರಾದ(ಬಾ) ಪಟ್ಟಣದಲ್ಲಿ ಸರಕಾರದ ನ್ಯಾಯಬೇಲೆ ಅಂಗಡಿಯಲ್ಲಿ ಹಣ ವಸೋಲಿ ಮಾಡುತ್ತಿರುವ ಕುರಿತು, ಹಾಗೂ ಸರಿಯಾಗಿ ಸರಕಾರದ ಸಮಯದನುಸಾರ ಕಾರ್ಯನಿರ್ವಹಿಸದೆ ಇರುವ ಕುರಿತು. ಮತ್ತು ಪ್ರತಿ ಒಬ್ಬ ವ್ಯಕ್ತಿಯ ಹಿಂದೆ 2 ಕೆ.ಜಿ ಅಕ್ಕಿ ಕಡಿಮೆ ಕೊಡುತ್ತಿರವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ, ಔರಾದ(ಬಾ) ಪಟ್ಟಣದಲ್ಲಿ ಸರಕಾರದ ನ್ಯಾಯಬೇಲೆ ಅಂಗಡಿಯಲ್ಲಿ ಥಂಬ ತೆಗೆದುಕೊಂಡು ಪ್ರತಿಯೋಬ್ಬರಲ್ಲಿ 30-40 ರೂಪಾಯಿಗಳು ಹಣ ವಸೋಲಿ ಮಾಡುತಿದ್ದಾರೆ. ಹಾಗೂ ಸರಿಯಾಗಿ ಸರಕಾರದ ಸಮಯದನುಸಾರ ಕಾರ್ಯನಿರ್ವಹಿಸದೆ ತಿಂಗಳಲ್ಲಿ 3-4 ದಿನ ಮಾತ್ರ ವಿತರಣೆಯನ್ನು ಮಾಡುತ್ತಿದ್ದಾರೆ. ಇದರಿಂದ ಔರಾದ(ಬಾ) ಪಟ್ಟಣದ ಬರುವ ತಾಂಡದ ಜನರಿಗೆ ಇದರಿಂದ ತುಂಬಾ ತೋಂದರೆಯಾಗುತ್ತಿದೆ. ಔರಾದ(ಬಾ)ನಲ್ಲಿ ಸೂಮಾರು 7-8 ತಾಂಡಗಳು ಬರುತ್ತವೆ. ಮತ್ತು ಪ್ರತಿ ಒಬ್ಬ ವ್ಯಕ್ತಿಯ ಹಿಂದೆ 2 ಕಿ.ಜಿ ಅಕ್ಕಿ ಕಡಿಮೆ ಕೊಡುತ್ತಿದ್ದಾರೆ. ಅಲ್ಲದೆ ಅವರ ತಕ್ಕಡಿಯಲ್ಲಿ 1-2 ಕೆ.ಜಿ.ಕಡಿಮೆ ಬರುತ್ತದೆ. ಯಾವುದೆ ನ್ಯಾಯ ಬೇಲೆ ಅಂಗಡಿಯ ಮೇಲೆ ಕಾರ್ಯಾನಿರ್ವಹಿಸುವ ಸಮಯದ ಫಲಕಗಳು ಇಲ್ಲಾ ಮತ್ತು ಪ್ರತಿ ವ್ಯಕ್ತಿಗೆ ಎಷ್ಟು ಆಹಾರ ಧಾನ್ಯ ಬರುವ ಮಾಹಿತಿ ಕೂಡ ಇರುವುದಿಲ್ಲಾ. ನ್ಯಾಯಬೆಲೆ ಅಂಗಡಿ ಯವರು ಜನ ಸಾಮಾನ್ಯರೆಗೆ ಯಾವುದೆ ರೀತಿಯಲ್ಲಿ ಸ್ಪಂದಿಸುತ್ತಿಲ್ಲಾ, ಜನರಿಗೆ ತೋಂದರೆ ಮಾತ್ರ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ತಾವುಗಳು ಸದರಿ ಯದರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ 8 ದಿವಸದಲ್ಲಿ ನ್ಯಾಯ ಒದಗಿಸಿಕೊಡಬೇಕೆಂದು ತಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ತಾವುಗಳು ಯಾವುದೆ ರೀತಿಯ ಕ್ರಮ ಕೈಗೊಳ್ಳದೆ ಇದಲ್ಲಿ, ನಮ್ಮ ಸಂಘಟನೆ ವತಿಯಿಂದ ಮುಂಬರುವ ದಿನಗಳಲ್ಲಿ ತಮ್ಮ ಕಛೇರಿ ಮುಂದುಗಡೆ ಧರಣಿ ಸತ್ಯಗ್ರಹ ಹೋರಾಟ ಮಾಡುತ್ತೇವೆಂದು ತಮ್ಮಲ್ಲಿ ಈ ಮೂಲಕ ತಿಳಿಸುತ್ತೇವೆ.

ವಂದನೆಗಳೊಂದಿಗೆ,

ಲಕ್ಷ್ಮಣ ಎಸ್. ದೇವಕ

ರಾಜ್ಯಧ್ಯಕ್ಷರು ಯುವ ಘಟಕ

4 ಶ್ರೀ ಸಚೀನ ಮೇತ್ರ ತಾಲೂಕಾಧ್ಯಕ್ಷರು

ತಮ್ಮ ವಿಶ್ವಾಸಿ,

ರಾಜಕುಮಾರ ಮುಧಾಳ ಯುವ ಮುಖಂಡರು

ಅಮರೇಶ್ವರ ಬ್ಯಾಡೆ ಸದಸ್ಯರು

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology