Home » ಲೈವ್ ನ್ಯೂಸ್ » ಎನ್. ಧರ್ಮಸಿಂಗ್ ಕ್ರಿಕೆಟ್ ಟ್ರೋಫಿ

ಎನ್. ಧರ್ಮಸಿಂಗ್ ಕ್ರಿಕೆಟ್ ಟ್ರೋಫಿ

Facebook
X
WhatsApp
Telegram

26.ಡಿಸೆಂಬರ್.25: ಬೀದರ್‍ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್
ಸ್ಮರಣಾರ್ಥ ಕ್ರಿಕೆಟ್ ಟೂರ್ನಿಯ ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ
ವಿತರಿಸಲಾಯಿತು


ಎನ್. ಧರ್ಮಸಿಂಗ್ ಕ್ರಿಕೆಟ್ ಟ್ರೋಫಿ ಗೆದ್ದ ಬಗದಲ್ ತಾಂಡ ತಂಡ
ಬೀದರ್: ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಸ್ಮರಣಾರ್ಥವಾಗಿ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಎನ್. ಧರ್ಮಸಿಂಗ್ 9ನೇ ಕ್ರಿಕೆಟ್ ಟ್ರೋಫಿ’
ಟೂರ್ನಿಯನ್ನು ಬಗದಲ್ ತಾಂಡ ಕ್ರಿಕೆಟ್ ಕ್ಲಬ್ ತಂಡ ಗೆದ್ದುಕೊಂಡಿದೆ.


ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಬಗದಲ್ ತಾಂಡ ಕ್ರಿಕೆm ಕ್ಲಬ್ ತಂಡವು ಎಚ್.ಕೆ.ಜಿ.ಎನ್. ಚಿಟ್ಟಾ ಕ್ರಿಕೆಟ್ ಕ್ಲಬ್ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎಚ್.ಕೆ.ಜಿ.ಎನ್. ಚಿಟ್ಟಾ ಕ್ರಿಕೆಟ್ ಕ್ಲಬ್ ತಂಡ ರನ್ನರ್ ಅಪ್‍ಗೆ ತೃಪ್ತಿ ಪಟ್ಟುಕೊಂಂಡಿತು.
ಮೊದಲು ಬ್ಯಾಟ್ ಮಾಡಿದ ಎಚ್.ಕೆ.ಜಿ.ಎನ್. ಚಿಟ್ಟಾ ಕ್ರಿಕೆಟ್ ಕ್ಲಬ್ ತಂಡವು ನಿಗದಿತ 10 ಓವರ್‍ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 113 ರನ್ ಪೇರಿಸಿತು. ನಂತರ ಬ್ಯಾಟ್ ಮಾಡಿದ ಬಗದಲ್ ತಾಂಡ ಕ್ರಿಕೆಟ್ ಕ್ಲಬ್ ತಂಡ 9 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ
117 ರನ್ ಗಳಿಸಿ ಜಯಭೇರಿ ಬಾರಿಸಿತು.


ವಿಜೇತ ತಂಡ ರೂ. 1 ಲಕ್ಷ ನಗದು ಹಾಗೂ ಟ್ರೋಫಿ ಮತ್ತು ರನ್ನರ್ ಅಪ್ ತಂಡ ರೂ. 50bಸಾವಿರ ನಗದು ಹಾಗೂ ಟ್ರೋಫಿಗೆ ಭಾಜನವಾಯಿತು. ಸಚಿನ್ ಡಿಗ್ಗೆ ಸರಣಿ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್‍ಮೆನ್ ಹಾಗೂ ಸೈಯದ್ ಅಝರ್ ಉತ್ತಮ ಬೌಲರ್ ಪ್ರಶಸ್ತಿಗೆ ಪಾತ್ರರಾದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ 32
ಕ್ರಿಕೆಟ್ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.


ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಟೂರ್ನಿಯನ್ನು ಆಯೋಜಕರಾದ ಮುಖಂಡ ಚಂದ್ರಾಸಿಂಗ್
ಅವರು, ವಿಜೇತ, ರನ್ನರ್ ಅಪ್ ತಂಡಗಳಿಗೆ ಟ್ರೋಫಿ, ನಗದು ಬಹುಮಾನ ಹಾಗೂ ಉತ್ತಮ ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದರು.


ಪ್ರಮುಖರಾದ ಯುಸೂಫ್ ಅಲಿ ಜಾಮಾದಾರ್, ಎನ್.ಎ. ಖಾದ್ರಿ, ನಾರಾಯಣರಾವ್ ಭಂಗಿ, ಶ್ರೀನಿವಾಸ್ ರೆಡ್ಡಿ, ರಶೀದ್ ಪಟೇಲ್, ಪ್ರಭಾವತಿ, ಲಕ್ಷ್ಮಿ, ಮಹಾಂತೇಶ ರೇಕುಳಗಿ,ಉಮೇಶ ಶಹಾಪುರ, ಫಸಿ ಪಟೇಲ್, ನಾಗಶೆಟ್ಟಿ ಅರ್ಕಿ, ಶಿವಕುಮಾರ ಮನ್ನಾಎಖ್ಖೆಳ್ಳಿ,
ಗಫುರಸಾಬ್ ಚಿಟ್ಟಾ, ಮಾರುತಿ ಮಾಸ್ಟರ್, ಗೌಸೊದ್ದೀನ್, ನಾಸೀರ್ ಖಾದ್ರಿ, ನಾಜೀಮ್ ಪಟೇಲ್ ಮತ್ತಿತರರು ಇದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology