Home » ಲೈವ್ ನ್ಯೂಸ್ » ಕನ್ನಡ ಹೆಚ್ಚು ಬಳಕೆ ಮಾಡಿದಾಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ-ಭಾರತಿ ವಸ್ತçದ

ಕನ್ನಡ ಹೆಚ್ಚು ಬಳಕೆ ಮಾಡಿದಾಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ-ಭಾರತಿ ವಸ್ತçದ

Facebook
X
WhatsApp
Telegram

ಬೀದರ.26.ಡಿಸೆಂಬರ್.25:- ನಮ್ಮ ಕನ್ನಡ ನಾಡು, ಕನ್ನಡ ನುಡಿ, ಭಾರತ ಸಂಸ್ಕೃತಿ ಎಲ್ಲವೂ ಸಮೃದ್ಧಿಯಾಗಿದೆ. ಕನ್ನಡ ಹೆಚ್ಚು ಬಳಕೆ ಮಾಡಿದಾಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ ಎಂದು ಬೀದರ ಹಿರಿಯ ಸಾಹಿತಿ ಭಾರತಿ ವಸ್ತ್ರದ ನುಡಿದರು.
ಅವರು ಮಂಗಳವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೀದರ್ ಇವರ ಸಹಯೋಗದಲ್ಲಿ ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಸಂದೇಶ ನೀಡಿದ ಮಹಾಕವಿ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕುವೆಂಪು ಮಹಾನ್ ವ್ಯಕ್ತಿ, ಕನ್ನಡದ ಆಸ್ತಿ. ಅವರು ಬರೆದ ಅನೇಕ ಪುಸ್ತಕಗಳು ಚಲನಚಿತ್ರಗಳಾಗಿವೆ. ಅವರ ಸಾಹಿತ್ಯ ಜನರಿಗೆ ಮಾದರಿಯಾಗಿದೆ. ಅವರನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರು.


ಚಿಟ್ಟವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ಗಡಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಬೇಕು. ಗಡಿಯಲ್ಲಿ ಕುವೆಂಪು ಅವರನ್ನು ಪರಿಚಯಿಸುವ ಕಾರ್ಯ ಮಾಡಬೇಕು. ಗಡಿಭಾಗ ಸುಧಾರಣೆ ಆದರೆ ಕನ್ನಡವು ಬಳಸಲು ಸುಲಭವಾಗುತ್ತದೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡ ಬಳಸಬಹುದು. ಕನ್ನಡ ವ್ಯಕ್ತಿಗಳ ಮನಸ್ಸುಗಳನ್ನು ಕಟ್ಟಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಕನ್ನಡ ವಿಭಾಗದ ಮುಖ್ಯಸ್ಥ ಡಾ ರಾಜಕುಮಾರ ಅಲ್ಲೂರೆ ಅವರು ವಿಶೇಷ ಉಪನ್ಯಾಸ ನೀಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಕನ್ನಡವನ್ನು ಬಳಸಬೇಕು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವ ಕಾರ್ಯದಲ್ಲಿ ಕನ್ನಡವನ್ನು ತೊಡಗಿಸಬೇಕು. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಯು ಮಕ್ಕಳಿಗೆ ಕನ್ನಡ ಕಲಿಯಬೇಕು.

ಸುವ್ಯವಸ್ಥಿತ ಭಾಷೆ, ನಮ್ಮ ಕನ್ನಡ. ಕುವೆಂಪು ಅವರು ಮಹಾನ್ ವ್ಯಕ್ತಿಯಾಗಿ ಇತಿಹಾಸವನ್ನು ರಚಿಸಿದ್ದಾರೆ. ಅವರು ಕನ್ನಡ ಭಾಷೆಯಲ್ಲಿ ಶ್ರೀಮಂತರಾಗುತ್ತಾರೆ. ಅವರ ಮನಸ್ಸು ಬಡವರಿಗಾಗಿ ಮಿಡಿಯುತ್ತಿತ್ತು ಎಂದು ನುಡಿದರು.

ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ ಮಕ್ತುಂಬಿ ಎಂ ಅವರು ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟು ಪ್ರೋತ್ಸಾಹ ನೀಡಿಬೇಕು. ಕವಿಗಳು, ಕಲಾವಿದರ ಪರಿಚಯ ಮಾಡಿಕೊಂಡಬೇಕು. ಅಗಾಗ ಅವರು ಓದುವತ್ತ ಮನಸ್ಸು ಮಾಡುತ್ತಾರೆ. ಒಂದು ಸಲ ಓದುವ ಹವ್ಯಾಸ ಬೆಳೆಸಿಕೊಂಡರೆ ಅವರು ಮುಂದುವರೆಸಿಕೊAಡು ಹೋಗುತ್ತಾರೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬೆಳೆಸುವ ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಪಾಂಡುರoಗ ಬೆಂಬೂಳಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಯುತ್ತಲೆ ಇರಬೇಕು. ಚನ್ನಾಗಿ ಬದುಕಬೇಕಾದರೆ ಕಷ್ಟ ಪಟ್ಟು ಕಲಿಯಬೇಕು. ಶ್ರದ್ಧೆ, ಭಕ್ತಿ, ನಿಮ್ಮನ್ನು ಎತ್ತರದ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಲಕ್ಷಿö್ಮoಕಾಂತ ಶಂಕರರಾವ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೌರಮ್ಮ ಅವರು ಜನಪದ ಗೀತೆ ಹಾಡುವದರ ಮೂಲಕ ಪ್ರಾರ್ಥನೆ ನೆರವೇರಿಸಿದರು. ರಮೇಶ ಪೂಜಾರಿ ಅವರು ನಿರೂಪಿಸಿದರು. ಗೌಡಪ್ಪ ಜಿ ಅವರು ಸ್ವಾಗತಿಸಿದರು. ವೀರಶೆಟ್ಟಿ ಕುಂಬಾರ ವಂದಿಸಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology