Home » ಲೈವ್ ನ್ಯೂಸ್ » ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.26.ಡಿಸೆಂಬರ್.25:- ಮನ್ನಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಿಂದೋಲ ನದಿಯ ನೀರಿನಲ್ಲಿ ದಿನಾಂಕ: 26-09-2024 ರಂದು ಅಂದಾಜು 30-35 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡು ವ್ಯಕ್ತಿ ಮೃತ ಪಟ್ಟಿದ್ದು, ಇಲ್ಲಿಯವರೆಗೆ ಇತನ ವಾರಸುದಾರರು ಯಾರು ಎಂದು ಪತ್ತೆಯಾಗಿರುವುದಿಲ್ಲ.


ಅಜಿಮೊದ್ದಿನ ತಂದೆ ಗೌಸೊದ್ದಿನ್ ಸಾ:ಭಂಗೂರ ಇವರ ಲಿಖಿತ ದೂರಿನನ್ವಯ ಯು.ಡಿ.ಆರ್. ಸಂಖ್ಯೆ 10/2024 ಕಲಂ 194 (3) (iv) ಬಿ.ಎನ್.ಎಸ್.ಎಸ್.2023 ನೇದರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿ 5 ಫೀಟ್ 8 ಇಂಚ್ ಎತ್ತರ ಇದ್ದು, ಮೃತ ದೇಹವು ನೀರಿನಲ್ಲಿ ನೆನೆದರಿಂದ ದೇಹದ ಮೇಲಿನ ಚರ್ಮ ಹೋಗಿರುತ್ತದೆ. ದೇಹ ಪೂರ್ತಿ ಡಿ.ಕಂಪೋಜ್ ಆಗಿರುತ್ತದೆ. ಮೈಮೇಲೆ ಒಂದು ನೀಲಿ ಬಣ್ಣದ ಝೀನ್ಸ್ ಪ್ಯಾಂಟ್, ಒಂದು ನೀಲಿ ಮತ್ತು ಬಿಳಿ ಬಣ್ಣದ ಚೆಕ್ಸ ಅಂಗಿ, ಒಂದು ನೀಲಿ ಬಣ್ಣದ ನಿಕ್ಕರ ಧರಿಸಿರುತ್ತಾರೆ.

ಈ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಮನ್ನಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ಸಂಖ್ಯೆ: 8277975088, ಬೀದರ ಗ್ರಾಮೀಣ ವೃತ್ತದ ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ: 9480803439 ಅಥವಾ ಬೀದರ ಜಿಲ್ಲಾ ಕಂಟ್ರೋಲ್ ರೂಮ್ ಮೊಬೈಲ್ ಸಂಖ್ಯೆ: 9480803400 ಗೆ ಸಂಪರ್ಕಿಸುವಂತೆ ಮನ್ನಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology