ರಾಯಚೂರು.25.ಡಿಸೆಂಬರ್.25: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಎಪಿಎಮ್‌ಸಿ ಯಾರ್ಡ ಉಪಕೇಂದ್ರದಲ್ಲಿ ಪರಿವರ್ತಕ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಡಿಸೆಂಬರ್ 26ರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆ 10 ರಿಂದ ವಾಟರ್ ಸಪ್ಲೆöÊ, ಕೆ.ಐ.ಎ.ಡಿ.ಬಿ ಇಂಡಸ್ಟಿಯಿಲ್ ಏರಿಯಾ, ಯರಮರಸ್ ಕೈಗಾರಿಕಾ ಪ್ರದೇಶ, ನಂದಿನಿ ಹಾಲು ಡೈರಿ, ಗೆಸ್ಟ್ ಹೌಸ್, ಮಂಚಲಾಪುರ ರಸ್ತೆ, ಬೈಪಾಸ್ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ಏರಿಯಾ, ಶಾಂತಿ ಫೀಡರ್, ಸರಕಾರಿ ಇಂಜಿನಿಯರಿoಗ್ ಕಾಲೇಜ್, ಎಸ್.ಎಲ್.ಎನ್. ಎಂಜಿನಿಯರಿoಗ್ ಕಾಲೇಜ್, ಐ.ಐ.ಐಟಿ ಯರಮರಸ್ ಕ್ಯಾಂಪ್, ಪೋತಗಲ್, ಅಮರಾವತಿ, ಯರಮರಸ್ ದಂಡು, ಏಗನೂರು ಹಾಗೂ ಸುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 24×7 ಗ್ರಾಹಕರ ನಿರಂತರ ಸೇವಾ ಕೇಂದ್ರ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ರಾಯಚೂರು ಸಿಟಿಯ ವಿವಿಧೆಡೆ ಡಿ.26ರಂದು ವಿದ್ಯುತ್ ವ್ಯತ್ಯಯ?