Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸರ್ಕಾರ ಗಮನ ಹರಿಸಲೀ…

ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸರ್ಕಾರ ಗಮನ ಹರಿಸಲೀ…

Facebook
X
WhatsApp
Telegram

ರಾಜ್ಯದಲ್ಲಿ ಅನೇಕ ಶಾಸಕರು. ಮಂತ್ರಿಗಳು ಮತ್ತು ಅಧಿಕಾರಿಗಳು ಯಾರಿಗೆ ಅತಿಥಿ ಉಪನ್ಯಾಸಕರ ಸಂಧ್ಯಾಕಾಲದ ನೋವು ಯಾರಿಗೆ ಕಾಣುತಿಲ್ವ  ? ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸತತ 2 ದಶಕದಿಂದ ಕಡಿಮೆ ಸಂಬಳ ಮೇಲೆ ಕಾರ್ಯ ಮಾಡಿದಿವೆ ಈಗ ರಾಜ್ಯ ಸರ್ಕಾರ ಯುಜಿಸಿ ಅನರ್ಹ ಅಂದು ಕೆಲಸದಿಂದ ವಜಾ ಮಾಡಿದೆ,

ಅತಿಥಿ ಉಪನ್ಯಾಸಕರ ಸ್ಥಿತಿ………..  95 ವರ್ಷದ ಅಪ್ಪ, 87 ವರ್ಷದ ಅಮ್ಮ. ಇದ್ದ ಒಬ್ಬಳೇ ಸಾಕು ಮಗಳ ಮದುವೆ ಮಾಡಿದ್ದೇನೆ. 25 ವರ್ಷ ಪಾಠ ಮಾಡಿ, ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿದ್ದೇನೆ. ಆದರೆ ಈಗ ನಾನು ಅನರ್ಹ’! ಇದು ಪಾವಗಡದ 57 ವರ್ಷದ ನರಸಿಂಹರಾಜು ಅವರ ನೋವಿನ ನುಡಿ.

26 ವರ್ಷ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನಾಕೆ ಗೃಹಿಣಿ. ಇನ್ನೆರಡು ವರ್ಷಕ್ಕೆ ನಾನು ನಿವೃತ್ತನಾಗಬೇಕು. ಮಕ್ಕಳಿನ್ನೂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಪ-ಸ್ವಲ್ಪ ಬರಡು ಭೂಮಿಯಲ್ಲಿಬದುಕು ಕಷ್ಟ. ಮುಂದೇನೆಂದು ದಿಕ್ಕೇ ತೋಚುತ್ತಿಲ್ಲ’. ಇದು ಪಾವಗಡದ ಪುಟ್ಟ ಗ್ರಾಮ ಇಂದ್ರಬೆಟ್ಟದ ಬಾಲ ವರದರಾಜು ಅವರ ಕಥೆ.

ಈ ಇಬ್ಬರದ್ದು ಉದಾಹರಣೆ ಮಾತ್ರ. ಹೀಗೆ ಕಥೆ ಕೇಳುತ್ತಾ ಹೋದರೆ ರಾಜ್ಯದ ನಾನಾ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ ವರ್ಷದವರೆಗೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ 5,350 ಅತಿಥಿ ಉಪನ್ಯಾಸಕರದ್ದೂ ಒಂದೊಂದು ಬದುಕಿನ ಬವಣೆ.

ಜೀವನ ಅತಂತ್ರ:

ರಾಜ್ಯದ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಯುಜಿಸಿ ನಿಯಮದಂತೆ ಪಿಎಚ್‌ಡಿ, ಎನ್‌ಇಟಿ ಅಥವಾ ಕೆ-ಸೆಟ್‌ ಅರ್ಹತೆ ಕಡ್ಡಾಯ ಮಾಡಲಾಗಿದೆ. ಇದರಿಂದ 5,350 ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗುತ್ತಿದೆ.

ರಾಜ್ಯದ 432 ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ ವರ್ಷ ಸೇವೆ ಸಲ್ಲಿಸಿದ್ದ 10,300 ಅತಿಥಿ ಉಪನ್ಯಾಸಕರಲ್ಲಿ 5,350 ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದಿಲ್ಲ.

ಸಂಧ್ಯಾಕಾಲದಲ್ಲಿ ನೋವು:

600 ರೂ., 1200 ರೂ., 3000 ರೂ., 5,000 ರೂ., 8000 ರೂ., 11,000 ರೂ., 13,000 ರೂ., 32,000 ರೂ… ಈಗ 40,000 ರೂ. ಗೌರವಧನಕ್ಕೆ 25-30 ವರ್ಷಗಳಿಂದ ಉಪನ್ಯಾಸಕರು ಸೇವೆ ಸಲ್ಲಿಸಿದ್ದಾರೆ. ಆರೋಗ್ಯ ವಿಮೆ, ಪಿಂಚಣಿ, ಕೌಟುಂಬಿಕ ಭದ್ರತೆಯಿಲ್ಲದೆ ಕೆಲಸ ಮಾಡಿದ್ದಾರೆ. ಅಲ್ಲದೆ ಪ್ರಾಧ್ಯಾಪಕರು, ಪ್ರಿನ್ಸಿಪಾಲರ ಕಿರುಕುಳದಲ್ಲಿ, ಹೆಚ್ಚುವರಿ ಕಾರ್ಯಭಾರವನ್ನೂ ನಿಭಾಯಿಸಿ ಸರಕಾರಕ್ಕೆ ಕೋಟ್ಯಂತರ ರೂ. ಉಳಿಕೆ ಮಾಡಿರುವ ಉಪನ್ಯಾಸಕರು ವೃತ್ತಿ ಜೀವನದ ಸಂಧ್ಯಾಕಾಲದಲ್ಲಿ ನೋವು ಅನುಭವಿಸುವಂತಾಗಿದೆ.

3 ವರ್ಷಗಳ ಕಾಲಾವಕಾಶ:

2018 ರಲ್ಲಿ ಯುಜಿಸಿ ಪರಿಷ್ಕೃತ ನಿಯಮಾವಳಿಯಲ್ಲಿ ಪದವಿಗೆ ಪಾಠ ಮಾಡುವ ಅತಿಥಿ ಉಪನ್ಯಾಸಕರಿಗೆ ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್‌ಡಿ ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಕಡ್ಡಾಯವಾಗಿ ಹೊಂದಿರಲೇಬೇಕೆಂದು ಹೇಳಿತು. ಆಗ ರಾಜ್ಯ ಸರಕಾರಕ್ಕೆ ಅತಿಥಿ ಉಪನ್ಯಾಸಕರು ಮನವಿ ಮಾಡಿದಾಗ, ರಾಜ್ಯ ಸರಕಾರ 3 ವರ್ಷಗಳ ಕಾಲ ಗಡುವು ನೀಡಿ, ಮೂರರಲ್ಲಿ ಒಂದು ಅರ್ಹತೆ ಪಡೆಯಲು ಅವಕಾಶ ನೀಡಿತ್ತು.
ಅತಿಥಿ ಉಪನ್ಯಾಸಕರಿಂದಲೇ ಉನ್ನತ ಶಿಕ್ಷಣ :

ರಾಜ್ಯದ 432 ಪ್ರಥಮದರ್ಜೆ ಕಾಲೇಜುಗಳಲ್ಲಿ 6,100 ಕಾಯಂ ಪ್ರಾಧ್ಯಾಪಕರಿದ್ದಾರಷ್ಟೇ. ಉಳಿದಂತೆ ಕಾಲೇಜುಗಳಲ್ಲಿ ಪಾಠ, ಆಡಳಿತ ಸಹಕಾರ, ನ್ಯಾಕ್‌ ಕಾರ್ಯಗಳು ಎಲ್ಲವಕ್ಕೂ ಅತಿಥಿ ಉಪನ್ಯಾಸಕರೇ ಬೇಕು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology