ಬೀದರ.21.ಅಗಸ್ಟ್.25:- 2025-26ನೇ ಸಾಲಿನ ತಾಲೂಕಾ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟವನ್ನು ಬೀದರ ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಆಗಸ್ಟ್.28 ರಿಂದ ಸೆಪ್ಟೆಂಬರ್.3 ರವರೆಗೆ ಆಯೋಜಿಸಲಾಗಿದ್ದು,
ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಸಕ್ತರಿರುವ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್‍ಲೈನ್ https://dasaracmcup-2025.etrpindia.com/KA-sports ಮೂಲಕ ಅಥವಾ ಕ್ಯೂರ್ ಆರ್ ಕೋಡ್ ಉಪಯೋಗಿಸಿ ನೋಂದಣಿ ಮಾಡಿಕೊಂಡು ಆಯಾ ತಾಲೂಕಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಾ ಮಟ್ಟದ ದಸರಾ ಸಿ.ಎಂ.ಕಪ್ ಕ್ರೀಡಾಕೂಟಗಳ ವಿವರ: ಆಗಸ್ಟ್.28 ರಂದು ಬೆಳಿಗ್ಗೆ 9 ರಿಂದ ಔರಾದ ತಾಲ್ಲೂಕಾ ಕ್ರೀಡಾಂಗಣದಲ್ಲಿ (ನೋಡಲ್ ಅಧಿಕಾರಿ ದೂರವಾಣಿ ಸಂಖ್ಯೆ: 9902563248 ಹಾಗೂ ಇಮೇಲ್: yeshwant123Dombale@gmail.com ). ಆಗಸ್ಟ್.30 ರಂದು ಬೆಳಿಗ್ಗೆ 9 ರಿಂದ ಹುಮನಾಬಾದ ತಾಲ್ಲೂಕಾ ಕ್ರೀಡಾಂಗಣದಲ್ಲಿ (ನೋಡಲ್ ಅಧಿಕಾರಿ ದೂರವಾಣಿ ಸಂಖ್ಯೆ: 9448676268 ಹಾಗೂ ಇಮೇಲ್: boralekashinath21@gmail.com), ಸೆಪ್ಟೆಂಬರ್.1 ರಂದು ಬೆಳಿಗ್ಗೆ 9 ರಿಂದ ಬಸವಕಲ್ಯಾಣ ತಾಲ್ಲೂಕಾ ಕ್ರೀಡಾಂಗಣದಲ್ಲಿ (ನೋಡಲ್ ಅಧಿಕಾರಿ ದೂರವಾಣಿ ಸಂಖ್ಯೆ: 9591076399 ಹಾಗೂ ಇಮೇಲ್: naganathdubalgunde@gmail.com). ಸೆಪ್ಟೆಂಬರ್.2 ರಂದು ಬೆಳಿಗ್ಗೆ 9 ರಿಂದ ದಿವ್ಯ ಜ್ಯೋತಿ ಪ್ರೌಢ ಶಾಲೆ ಭಾಲ್ಕಿ (ನೋಡಲ್ ಅಧಿಕಾರಿ ದೂರವಾಣಿ ಸಂಖ್ಯೆ: 9986791674 ಹಾಗೂ ಇಮೇಲ್: rohidasrathod1968@gmail.com), ಸೆಪ್ಟೆಂಬರ್.3 ರಂದು ಬೆಳಿಗ್ಗೆ 9 ರಿಂದ ಜಿಲ್ಲಾ ಕ್ರೀಡಾಂಗಣ ಬೀದರದಲ್ಲಿ (ನೋಡಲ್ ಅಧಿಕಾರಿ ದೂರವಾಣಿ ಸಂಖ್ಯೆ: 7019283943 ಹಾಗೂ ಇಮೇಲ್: Venkatraodombale5744@gmail.com ) ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
