ಬೀದರ.13.ಆಗಸ್ಟ್.25:- ಇಂದು ಬೀದರ್ ಜಿಲ್ಲಾಡಳಿತ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಇಲಾಖೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮವನ್ನು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಬೀದರ ಇಲ್ಲಿ ಹಮ್ಮಿಕೊಳ್ಳಲಾಯಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂ.ಎಸ್. ಶ್ರೀಧರ, ಉಪ ನಿರ್ದೇಶಕರು, ಇವರು ಇಂದಿನ ಯುವ ಜನತೆ ವಿವಿಧ ಕಾರಣಗಳಿಂದ ಗಾಂಜಾ, ಅಫೀಮು, ಕೋಕೆನ್, ಚರಸ್, ಹೆರಾಯಿನ್, ಮಧ್ಯಪಾನ ಮುಂತಾದ ನಶೇ ವಸ್ತುಗಳಿಗೆ ದಾಸರಾಗುತ್ತಿರುವುದು ಇಂದಿನ ಸಮಾಜ ಗಂಭೀರ ಸಮಸ್ಯೆಯಾಗಿದೆ. ಯುವ ಜನತೆ ನಶೆಗೆ ತುತ್ತಾಗುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ ಕೂಗ್ಗುವುದಲ್ಲದೇ, ಕೌಟುಂಬಿಕ ವಾತಾವರಣ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ದೇಶದ ದೂಡಿಯುವ ವರ್ಗವೇ ಹೆಚ್ಚಿನ ಪ್ರಮಾಣದಲ್ಲಿ ಈ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೇಶದ ಆರ್ಥಿಕತೆ ಮೇಲೂ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಹಾಗೆಯೇ ಸಮಾಜದಲ್ಲಿ ಅಪರಾಧಗಳು ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ, ಜನರು ಹೆಚ್ಚು ಜಾಗೃತರಾಗಿ ಯುವ ಜನತೆ ನಶೆಯ ಪದಾರ್ಥಗಳಿಗೆ ಬಲಿಯಾಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಸ್ವಸ್ಥ ಸಮಾಜ ಹಾಗೂ ದೇಶದ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದೆ. ಯಾವುದೇ ವ್ಯಕ್ತಿ ಇಂತಹ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರೆ, ಸಾಗಾಣಿಕೆ ಮಾಡುತ್ತಿದ್ದರೆ, ಬಳಸುತ್ತಿದ್ದರೆ ಪೋಲೀಸರ ಗಮನಕ್ಕೆ ತರುವುದು ಪ್ರತಿಯೊಬ್ಬ ನಾಗರೀಕರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳಾದ ಶ್ರೀಕಾಂತ ಮೆಂಗಜಿ, ಬೀದರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಶಾರದಾ ಕಲ್ಮಲಕರ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಶ್ರೀ ಸುಭಾಷ ರತ್ನ, ಮೇಲ್ವಿಚಾರಕಿಯರು, ಕಛೇರಿ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.