ರಾಯಚೂರು.12.ಆಗಸ್ಟ್.25:- ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ ಪ್ರಮಾಣಪತ್ರ ಹೊಂದಿರುವ ಅಭ್ಯಾರ್ಥಿಗಳ ತಡಿಯುವ ಕುರಿತು. ಮಾನ್ಯರೇ, ಈ ಮೇಲ್ಕಾಣಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳಲ್ಲಿ ಉಳಿದ ಕಾರ್ಯಭಾರಕ್ಕೆ ಅಥಿತಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ವಿಚಾರ ತಮಗೆ ತಿಳಿದಿರುತ್ತದೆ.
ಇತ್ತೀಚಿಗೆ ಮಾನ್ಯ ಕರ್ನಾಟಕ ಉಚ್ಛಾನ್ಯಾಯಲಯವು UGC ನಿಯಮವಳಿಯಂತೆ ಅರ್ಹತೆ ಹೊಂದಿರುವ ಅಭ್ಯಾರ್ಥಿಗಳನ್ನು ಅಥಿತಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ತೀರ್ಪು ನೀಡಿರುತ್ತದೆ.
ಅದರಂತೆಯೆ ಕಾಲೇಜು ಶಿಕ್ಷಣ ಇಲಾಖೆಯು ಪ್ರಕ್ರಿಯೆಗೆ ಚಾಲನೆ ನೀಡಿರುತ್ತದೆ.
ಆದರೆ ಕೆಲ ಅಥಿತಿ ಉಪನ್ಯಾಸಕರು ಅರ್ಹತೆಯ ಮಾನದಂಡ ಹೊಂದಿರುವುದಿಲ್ಲ ಆದರು ಸಹ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಅನಧಿಕೃತ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಮಾಣಪತ್ರ ತಂದು ನೇಮಕ ಹೊಂದುವ ಸಾಧ್ಯತೆ ಇರುತ್ತದೆ.
ಮುಂದೆ ನೇಮಕ ಆಗಬಹುದಾದ ಅಭ್ಯರ್ಥಿಗಳ ದಾಖಲೆಗಳನ್ನು ಬಹುಜಾಗೃತಿಯಿಂದ ಸದರಿ ವಿಭಾಗದ ಮುಖ್ಯಸ್ಥರ ಸಮ್ಮುಖದಲ್ಲಿ ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು.
ಒಂದು ವೇಳೆ ಅನಧಿಕೃತ Ph.D ಪ್ರಮಾಣಪತ್ರ ತಂದು ಆಯ್ಕೆಯಾದ ಅಭ್ಯಾರ್ಥಿಯು ತಮ್ಮ ಕಾಲೇಜಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದರೆ ಅವರ ಹಿಂದಿನ ದಾಖಲೆಗಳಿಗೂ ಮತ್ತು ಪ್ರಸ್ತುತ ದಾಖಲೆಗಳನ್ನು ಹೊಲಿಕೆ ಮಾಡಿ ಬಹು ಮುತುವರ್ಜಿವಹಿಸಿ ಪರಿಶೀಲನೆ ಮಾಡಿ ನೇಮಕ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ.