ಬೀದರ.11.ಆಗಸ್ಟ್.25:- ಬೀದರ್ ಜಿಲ್ಲೆಯ ಔರಾದ ಬಾ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ. ಹಾಗೂ ಆಸ್ಪತ್ರೆಯಲ್ಲಿನ 2016 ರಿಂದ ಎಲ್ಲಾ ಹುದ್ದೇಗಳು ಅವರೆ ನಿಭಾಯಿಸುತ್ತಿರುವ.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಿನ ಬಡ ಜನರು ಹೇರಿಗೆ ಚಿಕಿತ್ಸೆಗೆ ಹಳ್ಳಿಯಿಂದ ತಾಲೂಕು ಆಸ್ಪತ್ರೆಗೆ ಬಂದಿರುತ್ತಾರೆ. ಆ ಸಮಯದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ನರ್ಸ್‌ಗಳು ಒಂದು ಹೇರಿಗೆಗೆ 3,000 ದಿಂದ 4,000 ರೂಪಾಯಿಗಳು ಪಡೆದುಕೊಳ್ಳುತ್ತಿದ್ದಾರೆ. ಸದರಿ ವಿಷಯ ತಾಲೂಕು ಅಧೀಕಾರಿಗಳ ಗಮನಕ್ಕೆ ತಂದುರು ಕೂಡ ನಿರ್ಲಕ್ಷಿಸಿರುತ್ತಾರೆ. ಇದರಲ್ಲಿ ತಾಲೂಕು ಅಧಿಕಾರಿಗಳು ಶಾಮೀಲು ಆಗಿರುವ ಶೆಂಕೆ ಬರುತ್ತಿದೆ. ಆದಕಾರಣ ತಾವುಗಳು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.
ಆಸ್ಪತ್ರೆಯಲ್ಲಿನ ತಾಲ್ಲೂಕಾ ಅಧೀಕಾರಿ ಹುದ್ದೇ ಮತ್ತು ತಾಲ್ಲೂಕಾ ಚೀಫ್ ಮೇಡಿಕಲ್ ಆಫೀಸರ್, ಮತ್ತು ಚಿಂತಾಕಿ, ವಡಗಾಂವ ಅಡ್‌ಮಿಸ್‌ಟೀಟಿನ ಅಧಿಕಾರಿ ಈ ಎಲ್ಲಾ ಹುದ್ದೇಗಳು ಒಬ್ಬರೆ ವಹಿಸಿಕೊಂಡಿರುತ್ತಾರೆ. ಅಲ್ಲದೆ 2016 ದಿಂದ 2025 ಔರಾದ(ಬಾ) ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬರೆಕಡೆಗೆ ವರ್ಗಾವಣೆ ಮಾಡಬೇಕು.
ಮುಖ್ಯಾವಾಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ರಕ್ತ ಪರಿಕ್ಷೇ ಕೇಂದ್ರದಲ್ಲಿ ಉಚಿತವಾಗಿ ಇದ್ದರು ಕೂಡ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತು ಆಸತ್ರೆಯ ಫೋಸ್ಟಮಾಟ್ ಕೋಣೆಯಲ್ಲಿ ಯಾವುದೆ ರೀತಿಯ ವಿದ್ಯೋತ ಸಂಪರ್ಕ ಕೂಡ ಇರುವುದಿಲ್ಲಾ. ಸ್ವಚ್ಛತೆ ಕೂಡ ಸರಿಯಾಗಿ ಮಾಡುತ್ತಿಲ್ಲಾ. ಮತ್ತು ಯಾವುದೆ ಸಿಬ್ಬಂದಿ ಸರಿಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲಾ. ಮತ್ತು ಸರಕಾರದ ಉಚಿತ ಇದ್ದ ಯೋಜನೆಯ ಬಗ್ಗೆ ಯಾವುದೆ ಲಾಭವನ್ನು ಕೋಡುತ್ತಿಲ್ಲಾ. ಮತ್ತು ಜನರಿಗೆ ತಿಳಿಸುತ್ತಿಲ್ಲಾ.
ಆದುದ್ದರಿಂದ ದಯಾಳುಗಳಾದ ತಾವುಗಳು ಸಾರ್ವಜನಿಕರಿಗೆ ತಿಳಿಯುವಂತೆ ದೋಡ್ಡ ಗಾತ್ರದಲ್ಲಿ ಬೋರ್ಡವನ್ನು ಅಳವಡಿಸಬೇಕು ಮತ್ತು ಉಚಿತ ಯೋಜನೆಗಳ ಕೂಡ ಬೋರ್ಡಗಳು ಹಾಕ ಬೇಕು ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಈ ಎಲ್ಲಾ ಕೇಲಸಗಳು 15 ದಿವಸದಲ್ಲಿ ಮಾಡಿಕೊಡಬೇಕು ಒಂದು ವೇಳೆ ತಡವಾದಲ್ಲಿ ರಾಷ್ಟ್ರೀಯ ಅಹೀಂದ ಸಂಘಟನೆ ವತಿಯಿಂದ ಧರಣಿ ಸತ್ಯಗ್ರಹ ನಡೆಸುತ್ತೇವೆಂದು ತಮ್ಮಲ್ಲಿ ಈ ಮೂಲಕ ತಿಳಿಸುತ್ತೇವೆ. ವಂದನೆಗಳೊಂದಿಗೆ,ಲಕ್ಷ್ಮಣ ಎಸ್. ದೇವಕತ್ತೆ ರಾಜ್ಯಧ್ಯಕ್ಷರು ಯುವ ಘಟಕ ರವಿ ಮೇತ್ರ ರಾಜ್ಯ ಉಪಧ್ಯಕ್ಷರು ಘಾಳೆಪ್ಪಾ ಬಿಂಬಳಖೇಡೆ ಜಿಲ್ಲಾಧ್ಯಕ್ಷರು ಸಚೀನ ಮೇತ್ರ ತಾಲೂಕಾಧ್ಯಕ್ಷರು ಔರಾದ ಅವರು ಉಪಸ್ಥಿತ ಇದ್ದರು.