12/08/2025 7:35 PM

Translate Language

Home » ಲೈವ್ ನ್ಯೂಸ್ » ರಾಜ್ಯ ಸರ್ಕಾರದಿಂದ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದಿಂದ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Facebook
X
WhatsApp
Telegram

ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ದಿ ನಿಗಮ, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಗಳಿಂದ ಅಧಿಸೂಚನೆ ಹೊರಡಿಸಿದಲಾಗಿದೆ.

2025-26ನೇ ಸಾಲಿಗೆ ನಿರುದ್ಯೋಗಿ ಪರಿಶಿಷ್ಠ ಜಾತಿಯ ಜನರ ಆರ್ಥಿಕಾಭಿವೃಧ್ದಿಗಾಗಿ ವಿವಿಧ ಯೋಜನೆಗಳಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೊನೆಯ ದಿನಾಂಕ: 10 ಸೆಪ್ಟೆಂಬರ್

ನೇರಸಾಲ ಯೋಜನೆ : ಸಣ್ಣ ಆದಾಯಗಳಿಸುವ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಟ ರೂ.1.00 ಲಕ್ಷ ಇದರಲ್ಲಿ ಶೇ.50 ಸಾಲ, ಮತ್ತು ಶೇ.50 ಸಹಾಯಧನವಾಗಿರುತ್ತದೆ. ಕುರಿ ಸಾಕಾಣಿಕೆ ಯೋಜನೆ: ಕುರಿ ಸಾಕಾಣಿಕೆ ಉದ್ದೇಶಕ್ಕೆ ಘಟಕ ವೆಚ್ಚ ಗರಿಷ್ಟ ರೂ.1.00 ಲಕ್ಷ ಇದರಲ್ಲಿ ಶೇ.50 ಸಾಲ, ಮತ್ತು ಶೇ.50 ಸಹಾಯಧನವಾಗಿರುತ್ತದೆ.

ಉದ್ಯಮ ಶೀಲತಾ ಯೋಜನೆ ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಾವಲಂಭಿ ಸಾರಥಿ ಯೋಜನೆ: ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚ ಶೇ.75ರಷ್ಟು ಅಥವಾ ಗರಿಷ್ಟ 4.00 ಲಕ್ಷಗಳ ಸಹಾಯಧನ.

ಫಾಸ್ಟ್ ಪುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್:- ಫುಡ್ ಕಾರ್ಟ್ ವಾಹನಗಳ ಉದ್ದೇಶದಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ 4.00 ಲಕ್ಷಗಳ ಸಹಾಯಧನ.

ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ಹಸುಗಳಿಗೆ ಘಟಕ ವೆಚ್ಚದ ಶೇ.50ರಷ್ಟು ಗರಿಷ್ಟ 1.25 ಲಕ್ಷಗಳ ಸಹಾಯಧನ. ಉದ್ಯಮಶೀಲತಾ ಯೋಜನೆ (ಇತರೆ ಉದ್ದೇಶ):-ವ್ಯಾಪಾರ ಮತ್ತು ಇತರೆ ಉದ್ದೇಶಗಳಿಗೆ ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷ ಸಹಾಯಧನ.

ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆ : ಈ ಯೋಜನೆಯಡಿ ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ ಜನಾಂಗದ ಮಹಿಳಾ ಫಲಾಪೇಕ್ಷಿಗಳಿಗೆ ಸಣ್ಣವ್ಯಾಪಾರ ಚಟುವಟಿಕೆ ಕೈಗೊಳ್ಳಲು ರೂ.5,00,000/-ಗಳನ್ನು ಮಂಜೂರು ಮಾಡಲಾಗುವುದು.

ಅದರಲ್ಲಿ ರೂ.2,50,000/-ಸಹಾಯಧನ, ರೂ.2,50,000/- ಭೀಜಧನ ಸಾಲವಾಗಿರುತ್ತದೆ.(ಶೇ.4%ರಷ್ಟು ಬಡ್ಡಿದರ)

ಭೂ ಒಡೆತನ ಯೋಜನೆ: ಪರಿಶಿಷ್ಟ ಜಾತಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಟ 0.20 ಎಕರೆ ಮೇಲ್ಪಟ್ಟು ಘಟಕ ವೆಚ್ಚದಲ್ಲಿ ಗರಿಷ್ಟ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ಜಮೀನನ್ನು ಖರೀದಿಸಿ ಕೊಡಲಾಗುವುದು. (ಶೇ.50 ರಷ್ಟು ಸಹಾಯಧನ/ಶೇ.50 ಸಾಲ, ಶೇ.4ರಷ್ಟು ಬಡ್ಡಿದರ) ಗಂಗಾ ಕಲ್ಯಾಣ ಯೋಜನೆ: ಸಣ್ಣ ಮತ್ತು ಅತೀಸಣ್ಣ ರೈತರು ಹೊಂದಿರುವ ಖುಷ್ಕಿ/ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. (1.20 ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀಸಣ್ಣ ರೈತರಾಗಿರಬೇಕು)

ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ www.suvidha.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಫಲಾಪೇಕ್ಷಿಗಳು ‘ಗ್ರಾಮಒನ್’, ‘ಬೆಂಗಳೂರುಒನ್’ ಹಾಗೂ ‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಸುವಿಧಾ ಪೋರ್ಟಲ್‍ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಸರ್ಕಾರದ ಸಾಂಸ್ಥಿಕ ಕೋಟ ಮತ್ತು ಮಂಡಳಿ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು ಸಹ ಸೇವಾ ಸಿಂಧು ಪೋರ್ಟಲ್‍ನಲ್ಲೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು,

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃಧ್ದಿ ನಿಗಮ, ಚಿತ್ರದುರ್ಗ ಜಿಲ್ಲೆ ಅಥವಾ ಆಯಾ ತಾಲ್ಲೂಕಿನ, ತಾಲ್ಲೂಕು ಅಭಿವೃಧ್ದಿ ಅಧಿಕಾರಿಗಳನ್ನು ಅಥವಾ ಕಲ್ಯಾಣ ಮಿತ್ರ ಸಹಾಯವಾಣಿ:-9482-300-400 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD