ರಾಯಚೂರು.೦9.ಆಗಸ್ಟ್.25:- ಆಗಸ್ಟ್ 08 ರಿಂದ ಆರಂಭವಾಗಿ ಆಗಸ್ಟ್ 26ರವರೆಗೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಗ್ನಿವೀರ್ ಸೇನಾ ನೇಮಕಾತಿ ರಾಲಿಗೆ ರಾಯಚೂರ ನಗರ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ್ ಅವರು ಆಗಸ್ಟ್ 8ರಂದು ಬೆಳಗ್ಗೆ ಚಾಲನೆ ನೀಡಿದರು.
ಈ ವೇಳೆ ಸೇನಾ ಅಧಿಕಾರಿಗಳು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು, ಮಹತ್ವದ ಸೇನಾ ಭರ್ತಿಗೆ ನಮ್ಮ ರಾಯಚೂರು ನಗರವನ್ನು ಆಯ್ಕೆ ಮಾಡಿದ್ದು ಹೆಮ್ಮೆಯ ವಿಷಯ. ಸೇನಾ ಭರ್ತಿಯು ಉತ್ತಮವಾಗಿ ಆಯೋಜನೆಗೊಂಡಿತು ಎನ್ನುವ ಸಂದೇಶ ರವಾನೆಯಾಗುವ ಹಾಗೆ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ, ಸೇನಾ ಅಧಿಕಾರಿ ಎಆರ್‌ಓ ಮನೋಜ್, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ತಹಸೀಲ್ದಾರ ಅಮರೇಶ ಬಿರಾದಾರ, ಕೃಷ್ಣ ಶಾವಂತಗೇರಿ ಸೇರಿದಂತೆ ಇತರರು ಇದ್ದರು.