08/08/2025 3:22 AM

Translate Language

Home » ಲೈವ್ ನ್ಯೂಸ್ » ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ

ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ

Facebook
X
WhatsApp
Telegram

ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.

ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿ.ಸಿ ಸಂಖ್ಯೆ: 71/2020 (ಗುನ್ನೆ ನಂ: 158/2018) ರಲ್ಲಿ ದಾಖಲಾದ ಪ್ರಕರಣದಲ್ಲಿ ದಿ: 02-08-2018 ರಂದು ಮಧ್ಯಾಹ್ನ 2 ಗಂಟೆ ಸಮಾರಿಗೆ ಕೊಪ್ಪಳ ಗವಿಮಠ ರಸ್ತೆಯ ಆಗಲಿಕರಣ ಕಾಮಗಾರಿ ನಡೆಯುತ್ತಿರುವಾಗ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡುವಾಗ ಜೆ.ಸಿ.ಬಿ ಅಪರೇಟರ್ ಕಮ್ ಮಾಲಿಕನಾದ ಕುಮಾರಸ್ವಾಮಿ ಬಿ. ಇತನು ತಮ್ಮ ಜೆ.ಸಿ.ಬಿ ಕ್ರೆನ್ ಸಂಖ್ಯೆ: ಎಂ.ಹೆಚ್ 06 ಎ.ಬಿ 8475 ವನ್ನು ಅಲಕ್ಷತನ ಹಾಗೂ ದುಡುಕಿನಿಂದ ಚಲಾಯಿಸುವಾಗ ಕ್ರೆನ್‌ನಿನ ಸರಪಳಿಯಿಂದ ವಿದ್ಯುತ್ ಕಂಬ ಜಾರಿ, ಜೆ.ಸಿ.ಬಿ ಕ್ರೆನ್ ಪಕ್ಕದಲ್ಲಿ ನಿಂತಿದ್ದ ಲೈನ್‌ಮ್ಯಾನ್ ಕೊಪ್ಪಳದ ಬಸವೇಶ್ವರ ನಗರದ ನಿಂಗಪ್ಪ ತಂದೆ ಮರಿಯಪ್ಪ ಮಾದರನ ತಲೆಯ ಮೇಲೆ ಬಿದ್ದ ಪರಿಣಾಮವಾಗಿ ಲೈನ್‌ಮ್ಯಾನ್ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದ ಕಾರಣ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮೃತ ಲೈನ್‌ಮ್ಯಾನ್ ನಿಂಗಪನ ಹೆಂಡತಿ ಮರಿಯಮ್ಮ ಮಾದರ ಅವರು ಫಿರ್ಯಾದಿ ಸಲ್ಲಿಸಿದ್ದ ಮೇರೆಗೆ ಮಹಿಳಾ ತನಿಖಾಧಿಕಾರಿಯಾದ ಪಿಎಸ್.ಐ ಫಕೀರಮ್ಮ ಡಬ್ಲೂ. ಅವರು ಗುನ್ನೆ ದಾಖಲಿಸಿ ತನಿಖೆಯನ್ನು ಕೈಗೊಂಡು ಅಪಾದಿತನಾದ ಭಾಗ್ಯನಗರದ ಕುಮಾರಸ್ವಾಮಿ ಬಿ. ತಂದೆ ಸನ್ಯಾಸಿರಾವ್ ಬಿ. ಇತನ ವಿರುದ್ಧ ಅಪಾದನೆ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಪ್ರಯುಕ್ತ ಮುಖ್ಯ ನ್ಯಾಯಿಕ ದಂಡಾಧಿಕಾರಿಯಾದ ಗೌರವನ್ವಿತ ಮಲ್ಕಾರಿ ರಾಮಪ್ಪ ಒಡೆಯರ್ ಸಿ.ಜೆ.ಎಂ ನ್ಯಾಯಾಲಯ ಕೊಪ್ಪಳ ರವರು ಅಪಾದಿತನ ವಿರುದ್ಧ ಭಾ.ದಂ.ಸಂ ಕಲಂ 304(ಎ) ಅಡಿಯಲ್ಲಿ ಅಪಾದನೆ ರಚಿಸಿ ಸಾಕ್ಷಿ ವಿಚಾರಣೆಯನ್ನು ಕೈಗೊಂಡು ವಕೀಲರ ವಾದವನ್ನು ಆಲಿಸಿ ಅಪಾದಿತನಿಗೆ ತಪ್ಪಿಸ್ಥನೆಂದು ತಿರ್ಮಾನಿಸಿ ಅಪಾದಿತನಿಗೆ ಭಾ.ದಂ.ಸಂ ಕಲಂ 304(ಎ) ಅಡಿಯಲ್ಲಿನ ಅಪರಾಧಕ್ಕೆ 2 ವರ್ಷ ಸಾದಾಕಾರಗೃಹ ಶಿಕ್ಷೆ ಮತ್ತು ರೂ. 10,000 ದಂಡವನ್ನು ವಿಧಿಸಿದ ತಿರ್ಪು ಬಹಿರಂಗ ನ್ಯಾಯಾಲಯದಲ್ಲಿ ದಿನಾಂಕ: 06-08-2025 ಘೋಷಣೆ ಮಾಡಿದ್ದಾರೆ.

ಈ ಪ್ರಕರಣದ ಅಭಿಯೋಜನೆಯನ್ನು ರಾಜ್ಯ ಸರ್ಕಾರದ ಪರ ಕೊಪ್ಪಳ ಸಿ.ಜೆ.ಎಂ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ವಾದ ಮಂಡಿಸಿದ್ದು, ನ್ಯಾಯಾಲಯಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಲತೀಪ್ ಪಾಶಾ ಸಿ.ಹೆಚ್.ಸಿ 15, ಗವಿಸಿದ್ದಪ್ಪ ಪಿ.ಸಿ 156, ಮಂಜುನಾಥ ಕಡಗತ್ತಿ ಪಿ.ಸಿ 605 ಇವರು ಸರಿಯಾದ ಸಮಯದಲ್ಲಿ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸುತ್ತಾರೆ ಕೊಪ್ಪಳ ಸಿ.ಜೆ.ಎಂ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಛೇರಿಯ ಪ್ರಕಟಣೆ ತಿಳಿಸಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD