ಬೀದರ.07.ಆಗಸ್ಟ್.25:- ಸರಕಾರಿ ಆದರ್ಶ ವಿದ್ಯಾಲಯ ಜನವಾಡಾ ಶಾಲೆಯಲ್ಲಿ 2025-26ನೇ ಸಾಲಿಗೆ 6ನೇ ತರಗತಿ ಖಾಲಿ ಇರುವ ಸೀಟುಗಳಿಗೆ ನಾಲ್ಕನೇ ಸುತ್ತಿನ ಪ್ರವೇಶನವನ್ನು ಕೌನ್ಸಲಿಂಗ್ ಮೊಂಡ್ ಮೂಲಕ 2025ನೇ ಆಗಸ್ಟ್.11 ಹಾಗೂ 12 ರಂದು ಸಾಮಾನ್ಯ ಮೆರಿಟ್ ವಿದ್ಯಾರ್ಥಿಗಳಿಗೆ ಮತ್ತು 2025ನೇ ಆಗಸ್ಟ್.13 ಮತ್ತು 14 ರಂದು ಮೀಸಲಾತಿ ವರ್ಗವಾರು ಮೆರಿಟ್ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನಡೆಯಲಿದೆ ಎಂದು ಜನವಾಡ ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9980496932, 8970224447 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.