ಬೀದರ.07.ಆಗಸ್ಟ್.25:- 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿದೆ.
ಈ ಯೋಜನೆಯಡಿ ಬೆಳೆ ವಿಮಾ ಯೋಜನೆ ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಲ್ಲಿ ಭಾಗವಹಿಸಿ ಲಾಭ ಪಡೆಯಬಹುದಾಗಿದೆ ಎಂದು ಬೀದರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ತೊಗರಿ (ಮಳೆಯಾಶ್ರಿತ(ಮ.ಆ)) ಹಾಗೂ ಸೋಯಾಅವರೆ (ಮ.ಆ) ಬೆಳೆಗಳು ಮತ್ತು ಇತರೆ ಬೆಳೆಗಳಾದ ಹೆಸರು (ಮ.ಆ), ಸೂರ್ಯಕಾಂತಿ (ಮ.ಆ), ಉದ್ದು (ಮ.ಆ), ಮುಸುಕಿನ ಜೋಳ (ಮ.ಆ), ಶೇಂಗಾ (ಮ.ಆ), ಜೋಳ (ಮ.ಆ), ಎಳ್ಳು (ಮ.ಆ), ಸಜ್ಜೆ (ಮ.ಆ), ಸೋಯಾಅವರೆ (ನೀರಾವರಿ(ನೀ)), ಭತ್ತ (ನೀ & ಮ.ಆ), ಹತ್ತಿ (ಮ.ಆ) ಬೆಳೆಗಳನ್ನು ವಿವಿಧ ತಾಲ್ಲೂಕಿಗೆ ನಿಗದಿಪಡಿಸಿ, ಹೋಬಳಿ ಮಟ್ಟಕ್ಕೆ ಅನುಷ್ಠಾನಗೊಳಿಸಲು “ಯೂನಿವರ್ಸಲ್ ಸೋಂಪೊ ಜನರಲ್ ಇನ್‌ಶ್ಯೂರೆನ್ಸ್ ಕಂಪನಿ ಲಿಮಿಟೆಡ್” ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ.
ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ರೈತರು ಪಾಲ್ಗೊಳ್ಳಲು
ಕೊನೆಯ ದಿನಾಂಕ: 31-08-2025 ಆಗಿರುತ್ತದೆ.
ಬೆಳೆ ಸಾಲ ಪಡೆಯುವ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೊಡಿಸಿದ ಬ್ಯಾಂಕ್ ಖಾತೆ ವಿವರ ಮತ್ತು ಆಧಾರ ಕಾರ್ಡ್ನ ಪ್ರತಿಯನ್ನು ಸಂಬoಧಿಸಿದ ಬ್ಯಾಂಕ ಗಳಿಗೆ ಒದಗಿಸಿ ನೋಂದಣಿ ಮಾಡಿಸಬಹುದು. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಹೊಂದಿರಬೇಕು.
ಹೆಚ್ಚಿನ ವಿವರಗಳಿಗೆ ಸ್ಥಳೀಯ ಗ್ರಾಮೀಣ/ಸಹಕಾರಿ/ಬ್ಯಾಂಕುಗಳನ್ನು ಅಥವಾ ಸಂಬoಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಂಬoಧಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.