ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.
ಔರಾದ (ಬಿ) ತಾಲೂಕಿನ ವಿವಿಧ ಯೋಜನೆಗಳಲ್ಲಿ ವಿಶೇಷವಾಗಿ ತಾಲೂಕಾ ಪಂಚಾಯತಿಯ ಅನಿರ್ಬಧಿತ ಅನುದಾನ 169.85 ರಲ್ಲಿ ಶಾಲೆ ರಿಪೇರಿ, ಪಿಠೋಪಕರಣ ಸರಬರಾಜು ಮಾಡುವುದು ಮತ್ತು ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವುದು ಹೀಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಇದೇ ಕಾಮಗಾರಿಗಳು ಜಿಲ್ಲಾ ಪಂಚಾಯತಿಯ ಅನುದಾನದಲ್ಲಿಯೂ ಕೂಡ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ.
ತಾಲೂಕಾ ಪಂಚಾಯತಿಯ ಅನಿರ್ಭಧಿತ ಅನುದಾನ ರೂ. 379047.00 ಬೀದರನ ಶಿವನಗಿಲ್ಲದ ಗುತ್ತಿಗೆದಾರರಾದ ಪ್ರೀತಿ ಗಂಡ ಗುರುರಾಜ ರವರಿಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಅನಾನೀಡುವ ಯಾವುದೇ ನಿಯಮಗಳನ್ನು ಪಾಲನೆ ಮಾಡದೇ ನೇರವಾಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿಕೊಂಡು ಅಕ್ರಮ ಅವದ್ಯಹಾರ ನಡೆಸಿರುತ್ತಾರೆ.
ಸುಮಾರು 3 ವರ್ಷಗಳಿಂದ ಸತತವಾಗಿ ಇದೇ ಕಾಮಗಾರಿಗಳನ್ನು ಪುನಃ ಪುನಃ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ ಮಾಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವವ್ಯಸಾರಗಳು ನಡೆಯುತ್ತಿದ್ದು, ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನೆಯಾಗಿರುವುದಿಲ್ಲ.
ಒಂದು ಹೈಮಾಸ್ಟ್ ದೀಪ ಸರಬರಾಯಿಟ್ ಮಾಡಲು ರೂ. 3.80 ಲಕ್ಷ ಇರುತ್ತದೆ. ಇವರು ಚಿಕ್ಕದಾಗಿರುವ ಕಂಬ ಮತ್ತು ಕಡಿಮೆ 12/23 ತಟ ಅಳವಡಿಸಿ ಕೇವಲ ರೂ. 1.00 ಲಕ್ಷದಲ್ಲಿ ಕಾಮಗಾರಿಯನ್ನು ಮುಗಿಸಿ, ಮಿತಿಮೀರಿದ.
ಭ್ರಷ್ಟಾಚಾರ ಮಾಡಿರುವ ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಪಡಿಸಿ, ಕಪ್ಪು ಪಟ್ಟಿಗೆ ಸೇರಿಸಿ ಮಾನ್ಯತೆ ರದ್ದುಪಡಿಸಬೇಕು. ಔರಾದ (ಬಿ) ತಾಲೂಕಿನಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕಟ್ಟಡಗಳು ಸಂಪೂರ್ಣ ಕಳಪೆ ಮಟ್ಟದ ಸುಣ್ಣ-ಬಣ್ಣ ಸಂಪೂರ್ಣ ಕಳಪೆ ಮಟ್ಟದಾಗಿದ್ದು, ಇದರಿಂದ ಶಾಲೆಯಲ್ಲಿ ಓದುವ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಭ್ರಷ್ಟ ಅಧಿಕಾರಿಗಳು, ಕಿರಿಯ ಇಂಜಿನೀಯರಗಳು ಹಾಗೂ ಗುತ್ತಿಗೆದಾರರು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಕೂಡಲೇ 2024-25ನೇ ಸಾಲಿನ ಅನಿರ್ಭಧಿತ ಅನುದಾನದ ಕಾಮಗಾರಿಗಳನ್ನು ಕೂಡಲೇ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಕೂಡಲೇ ವಾರದಲ್ಲಿ ಕ್ರಮಕೈಗೊಳ್ಳದಿದ್ದ ಪಕ್ಷದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಔರಾದ ತಾಲೂಕಾ ಪಂಚಾಯತಿಗೆ ಧರಣಿ, ಮುತ್ತಿಗೆ ಹೀಗೆ ಹಂತ ಹಂತವಾಗಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಈ ಮನವಿ ಪತ್ರದ ಮೂಲಕ ತಮ್ಮ ಗಮನಕ್ಕೆ ತರಲಾಗಿದೆ….

