05/08/2025 1:21 AM

Translate Language

Home » ಲೈವ್ ನ್ಯೂಸ್ » ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

Facebook
X
WhatsApp
Telegram

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರಿಗೆ 2025 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಬೆಂಗಳೂರು.04.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲಿ ಕಾರ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರು ಒಂದೇ ಒಂದು ವಾರದಲ್ಲಿ PH.D ಸಂಶೋಧನ ಪದವಿ  ಪಡೆಯಿತಿದಾರೆ ಅದೇ ರೀತಿ ಅಂಗವಿಕಲರ ಪ್ರಮಾಣ ಪತ್ರ ಸಹ ಪಡೆತಿದಾರೆ.

2023- 24 ನೇಮಕಾತಿ ಸಮಯದಲ್ಲಿ ಕೇವಲ 250 ಅಂಗವಿಕಲರು ಇದರು ಈವಾಗ ಒಂದೇ ವರ್ಷದಲ್ಲಿ 1200 ಅಂಗವಿಕಲರು ನಿರ್ಮಾಣ ಆಗಿದಾರೆ. ಸರ್ಕಾರ ದಯಮಾಡಿ ಅಂಗವಿಕಲರಿಗೆ ನ್ಯಾಯ ನೀಡಬೇಕು ಯಾರು ಸತ್ಯ ಇದಾರೆ ಯಾರು ಇಲ್ಲ. ಅದೇ ರೀತಿ ನಕಲಿ Ph. D ಸಹ ಪಡೆಕೊಂಡ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಕಸರತ್ತು ಮಾಡ್ತಿದಾರೆ

2025 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ UGC ನಿಯಮಗಳನ್ನು ಹೊಂದಿರುವುದು ಕಡ್ಡಾಯ ಎಂದು ತಾವು ತಮ್ಮ ಇಲಾಖೆಯ ಪ್ರಕಟಣೆ ಸಂಖ್ಯೆ ಕಾಶಿಇ/ನೇವಿ -1/ಅಉಆ/99/2024-25 ಯಲ್ಲಿ ತಿಳಿಸಿರುತ್ತೀರಿ ಮತ್ತು ಅದರಂತೆ ಅಭ್ಯರ್ಥಿಯು ಪಿಎಚ್ಡಿ ವಿಥ್ ಕೋರ್ಸ್ ವರ್ಕ್, ನೆಟ್, ಸ್ಲೆಟ್ ಅಥವಾ ಸೆಟ್ ಹೊಂದಿರಬೇಕಾಗಿರುತ್ತದೆ. ಇದರಿಂದ ಕೆಲವೊಬ್ಬ UGC ಅನರ್ಹ ಅಭ್ಯರ್ಥಿಗಳು ಅತಿಥಿ ಉಪನ್ಯಾಸಕ ವೃತ್ತಿಯನ್ನು ಪಡೆಯಲೇಬೇಕು ಎಂದು ಅನ್ಯಾಯ ಮಾರ್ಗದಿಂದ ಪಿಎಚ್ಡಿ ಪ್ರಮಾಣ ಪತ್ರಗಳನ್ನು ಹಣಕ್ಕೆ ಕೇವಲ ಒಂದು ವಾರದಿಂದ ತಿಂಗಳ ಒಳಗಾಗಿ ಖರೀದಿಸಿ ಇಲಾಖೆಯ ಕಣ್ಣಿಗೆ ಮಣ್ಣೆರಚಿ, ಆಡಳಿತ ವ್ಯವಸ್ಥೆಯನ್ನೇ ವಂಚಿಸಿ, 2024-25 ನೇ ಸಾಲಿನ ಅತಿಥಿ ಉಪನ್ಯಾಸಕರ ತಾತ್ಕಾಲಿಕ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗಿರುತ್ತಾರೆ.ಅಂತಹವರಲ್ಲಿ ನನ್ನ ಗಮನಕ್ಕೆ ಬಂದಂತಹ ವ್ಯಕ್ತಿಯೆಂದರೆ ( ಗಳೆಂದರೆ ) *ರಾಜು ಇಂಗ್ಲಿಷ್* ( ಡಿ ಸಿ ಇ ಐಡಿ : ಉದಾಹರಣೆ *REN54321* ) ಇವರು ಈ ಹಿಂದೆ ಸ, ಪ್ರ, ದ ಕಾಲೇಜು *ತಾಲೂಕು / ಜಿಲ್ಲೆಯ ಹೆಸರು* ಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಈ ಹಿಂದೆ 2023 -24 ನೇ ಸಾಲಿನಲ್ಲಿ ಇಲ್ಲದ ಪಿಎಚ್ಡಿ ವಿದ್ಯಾರ್ಹತೆ 2024-25 ನೇ ಸಾಲಿನಲ್ಲಿ ದಿಡೀರನೆ ಹೊರ ರಾಜ್ಯದಿಂದ ನಕಲಿ ಪಿಎಚ್ಡಿ ಪ್ರಮಾಣ ಪತ್ರವು ದೊರೆತಿರುತ್ತದೆ.

ಇದೇ ನಕಲಿ ಪ್ರಮಾಣ ಪತ್ರವನ್ನು ತೋರಿಸಿ 2024-25 ನೇ ಸಾಲಿನ ಮೆರಿಟ್ ಲಿಸ್ಟ್ನಲ್ಲಿ ಆಯ್ಕೆಯಾಗಿರುತ್ತಾರೆ ಹಾಗೂ ಇವರನ್ನು ಹೀಗೆ ಬಿಟ್ಟರೆ ಕೌನ್ಸಲ್ಲಿಂಗ್ ನಲ್ಲೂ ಭಾಗಿಯಾಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.

( 2024-25 ನೇ ಸಾಲಿನ ಮೆರಿಟ್ ಪಟ್ಟಿಯಲ್ಲಿ ಇವರ ರಾಂಕಿಂಗ್ ಸಂಖ್ಯೆ : *ವಿಷಯ* ಮತ್ತು *ರಾಂಕಿಂಗ್ ಸಂಖ್ಯೆ*) ಇವರ ಸೇವಾ ಅನುಭವ ( ಉದಾಹರಣೆ -15 ) ವರ್ಷವಿದ್ದು ಎಲ್ಲಿಯೂ ಇವರು ಸೇವಾ ಅನುಭವದ ಅವಧಿಯನ್ನು ಮೊಟಕುಗೊಳಿಸಿರುವುದಿಲ್ಲ, ಅದೂ ಅಲ್ಲದೆ 2024 ರ ಮಾನ್ಯ ಹೈಕೋರ್ಟ್ನ ಏಕಸದಸ್ಯ ಪೀಠದ ತೀರ್ಪು WP 23600, ಪುಟ ಸಂಖ್ಯೆ 9 ರಲ್ಲಿ ರೆಗ್ಯುಲರ್ ಮೋಡ್ ನಲ್ಲಿ ಮಾತ್ರ ಪಿಎಚ್ಡಿ ಅನ್ನು ಪಡೆದಿರಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಆದ್ದರಿಂದ ಇವರು ನಕಲಿ ಪ್ರಮಾಣ ಪತ್ರವನ್ನು ತಂದಿರುವುದರಲ್ಲಿ ತುಂಬಾ ಅನುಮಾನ ವ್ಯಕ್ತವಾಗುತ್ತಿದೆ.

ಇದು ನನಗೆ ದೊರೆತಿರುವ ಮಾಹಿತಿ ಮಾತ್ರವಾಗಿದ್ದು UGC ವಿದ್ಯಾರ್ಹತೆ ಕಡ್ಡಾಯವಾಗಿ ಜಾರಿಯಾಗಿರುವುದರಿಂದ ರಾಜ್ಯಾದ್ಯಂತ ನೂರಾರು ಅಭ್ಯರ್ಥಿಗಳು ನಕಲಿ ಪಿಎಚ್ಡಿ ಅನ್ನು ತಂದಿರುವ ಸಾಧ್ಯತೆ ಹೆಚ್ಚಾಗಿದ್ದು, ಇದರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಈಗಿದ್ದಾಗಲೂ ತಾವು ಮೌನ ವಹಿಸಿದರೆ ಉನ್ನತ ಶಿಕ್ಷಣದ ಗುಣಮಟ್ಟ ತಳಮಟ್ಟ ಸೇರುವುದರ ಜೊತೆಗೆ ನೈಜವಾಗಿ UGC ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ತುಂಬಲಾರದ ನಷ್ಟ ಮತ್ತು ಮೋಸವಾಗುತ್ತದೆ. ಆದ್ದರಿಂದ ಇಂತಹ ವಂಚಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ, ಇವರನ್ನು ಅತಿಥಿ ಉಪನ್ಯಾಸಕ ವೃತ್ತಿಯ ಆಯ್ಕೆ ಪ್ರಕ್ರಿಯೆಯಿಂದ ಶಾಶ್ವತವಾಗಿ ಕೈ ಬಿಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಿತ್ತೇನೆ.

ಈ ಎಲ್ಲಾ ಮಾಹಿತಿಯನ್ನು ಸವಿನಯದಿಂದ ತಮ್ಮ ಗಮನಕ್ಕೆ ತಂದಿರುತ್ತೇನೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಮನವಿ ಪತ್ರದ ಜೊತೆಗೆ ಲಗತ್ತಿಸಿರುತ್ತೇನೆ. ಆದಾಗ್ಯು ತಾವು ಇವರ ಮೇಲೆ ಯಾವುದೇ ಕ್ರಮವನ್ನು ಜರುಗಿಸದೆ ಹೋದರೆ ಇದಕ್ಕೆ ಸಂಭಂದಪಟ್ಟವರನ್ನೇ ನೇರ ಹೊಣೆಯನ್ನಾಗಿ ಮಾಡಿ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ.

       

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD