ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ ರೆಡ್ಡಿ ಸಮಾಜದವರ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ರೆಡ್ಡಿ ಜನಸಂಘದ ರಾಜ್ಯ ಸಂಘಟನಾ ಅಧ್ಯಕ್ಷ ಪ್ರಭಾಕರರೆಡ್ಡಿ ಹೇಳಿದ್ದಾರೆ.
ಕೊಪ್ಪಳ ನಗರದ ಶ್ರೀ ಶಿವಶರಣೇಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಭಾನುವಾರ ಸಂಜೆ ಈ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮಾಹಿತಿ ನೀಡಿದರು.
ರಾಜ್ಯಾದ್ಯಂತ ರಡ್ಡಿಸಮಾಜನ್ನು ಒಗ್ಗೂಡಿಸುವ ಕಾರ್ಯವಾಗಿದೆ. ನಾನಾ ಕಾರಣಗಳಿಗಾಗಿ ಹರಿದುಹಂಚಿಹೋಗಿರುವ ರಡ್ಡಿ ಮತ್ತು ರೆಡ್ಡಿ ಸಮಾಜವನ್ನು ಒಗ್ಗೂಡಿಸದೆ ಇದ್ದರೇ ನಮ್ಮ ಮಕ್ಕಳ ಭವಿಷ್ಯಕ್ಕೆ ದೊಡ್ಡ ಪೆಟ್ಟಾಗಲಿದೆ ಎಂದರು.
ಈ ಹಿನ್ನೆಲೆಯಲ್ಲಿ ಕೇವಲ ರಾಜ್ಯಾದ್ಯಂತ ಸಂಘಟನೆ ಮಾಡುವುದು ಅಷ್ಟೇ ಅಲ್ಲಾ, ದೇಶದಾದ್ಯಂತವೂ ರೆಡ್ಡಿ ಸಮಾಜವನ್ನು ಒಗ್ಗೂಡಿಸುವುದಕ್ಕಾಗಿಯೇ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ ರಡ್ಡಿ ಮತ್ತು ರೆಡ್ಡಿ ಸಮಾಜವರ ಸಮಾವೇಶವನ್ನು ನಡೆಸಲಾಗುವುದು. ಲಕ್ಷಾಂತರ ಸಂಖ್ಯೆಯಲ್ಲಿ ಅಂದು ಭಾಗವಹಿಸುವ ಮೂಲಕ ನಮ್ಮ ಒಗ್ಗೂಟ ತೋರಿಸಬೇಕಾಗಿದೆ. ಅಷ್ಟೇ ಅಲ್ಲಾ, ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಸೌಲಭ್ಯವನ್ನು ಪಡೆಯುವುದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂದರು.
ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ಮಾಡುತ್ತಿದ್ದು, ಇತರೆ ಜಾತಿಯ ಉಪಪಂಗಡದಂತೆ ಗುರುತಿಸಿಕೊಳ್ಳದೆ ರಡ್ಡಿ ಎಂದು ಕಡ್ಡಾಯವಾಗಿ ಜಾತಿ ಕಾಲಂ ನಲ್ಲಿ ನಮೂದಿಸುವಂತೆ ಮನವಿ ಮಾಡಿದರು. ಅದಕ್ಕೂ ಮೊದಲು ರಾಜ್ಯಾದ್ಯಂತ ಸಂಘಟನೆ ಮಾಡಿ, ಒಗ್ಗೂಡಬೇಕಾಗಿದೆ ಎಂದರು.
ರೆಡ್ಡಿ ಜನಸಂಘದ ನಿರ್ದೇಶಕ ವಾಸುದೇವರಡ್ಡಿ ಅವರು ಮಾತನಾಡಿ, ಸಮಾಜವನ್ನು ಸಂಘಟನೆ ಮಾಡುವ ಅಗತ್ಯವಿದೆ. ೩೫ ಲಕ್ಷ ಇದ್ದರೂ ಕೇವಲ ಏಳು ಲಕ್ಷ ತೋರಿಸಿದ್ದಾರೆ ರಾಜ್ಯದಲ್ಲಿ.
ಈಗ ಒಳ್ಳೆಯ ಸಮಯ. ಹೀಗಾಗಿ ನಾವು ಸರಿಯಾಗಿ ಬರೆಯಿಸಬೇಕು ಎಂದರು. ಈಗಲೇ ನಾವು
ಮುಂದಿನ ಪೀಳಿಗೆಗಾಗಿ ಒಗ್ಗಟ್ಟಿನಿಂದ ಇರಬೇಕು. ನಾವು ಡಿಸೈಡ ಪ್ಯಾಕ್ಟರ್ ಆಗಬೇಕು. ಒಗ್ಗಟ್ಟು ಬೇಕೇ ಬೇಕು . ಭಾವನೆಗಳು ವ್ಯಾತ್ಯಾಸ ಇದ್ದೇ ಇರುತ್ತದೆ. ಹೀಗಾಗಿ ನಾವೆಲ್ಲ ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ರೆಡ್ಡಿ ಜನಸಂಘದ ಶತಮಾನೋತ್ಸವ –
ಸೆಪ್ಟಂಬರ್ ೨೪ ರಂದು ರೆಡ್ಡಿ ಜನಸಂಘಕ್ಕೆ ಭರ್ತಿ ನೂರು ವರ್ಷಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ಕೋರಿದರು.
ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ತಾಲೂಕು ಅಧ್ಯಕ್ಷ ಪ್ರಭು ಹೆಬ್ಬಾಳ, ಹಿರಿಯ ಮುಖಂಡರಾದ ಎಸ್. ಬಿ.ನಾಗರಳ್ಳಿ, ವೆಂಕರಡ್ಡಿ ವಕೀಲರು. ದೇವಪ್ಪ ಅರಕೇರಿ, ಅಮರೇಶ ಪಾಟೀಲ, ಹೇಮರಡ್ಡಿ ಕೆಂಚರಡ್ಡಿ, ಶರಣಪ್ಪ ವಕೀಲರು, ಹನುಮರಡ್ಡಿ ಹಂಗನಕಟ್ಟಿ, ಶಿವಣ್ಣ ರಾಯಡ್ಡಿ, ಶಿವನಗೌಡ ಶಿವನಗುತ್ತಿ, ಸುರೇಶ ದಾಸರಡ್ಡಿ, ಮನೋಹರ ದಾದಮಿ, ವಿಶ್ವನಾಥ ಮಾಲಿಪಾಟೀಲ, ಬಸವರಾಜ ಮೇಟಿ, ರುದ್ರಗೌಡ ನಂದಿಹಾಳ, ಕೋಲಾರ ಜಿಲ್ಲಾಧ್ಯಕ್ಷ ಮಾಷ್ಣರಡ್ಡಿ ಸೇರಿದಂತೆ ಅನೇಕರು ಇದ್ದರು.
3ಕೆಪಿಎಲ್29 ಕೊಪ್ಪಳ ನಗರದ ಶ್ರೀ ಶಿವಶರಣೇಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಬೆಂಗಳೂರು ರೆಡ್ಡಿ ಜನಸಂಘದ ಸಂಘಟನಾ ಅಧ್ಯಕ್ಷ ಪ್ರಭಾಕರರೆಡ್ಡಿ ಅವರ ಆಗಮನದ ಹಿನ್ನೆಲೆಯಲ್ಲಿ ಸಭೆ ನಡೆಸಿ, ಒಗ್ಗಟ್ಟೂ ಪ್ರದರ್ಶನ ಮಾಡಲಾಯಿತು.
