02/08/2025 4:51 PM

Translate Language

Home » ಲೈವ್ ನ್ಯೂಸ್ » ಯುವಕರು ದುಶ್ಚಟಗಳಿಗೆ ಮಾರುಹೋಗದೇ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ-ಡಾ.ಎಸ್.ವಿ.ಪಾಟೀಲ್

ಯುವಕರು ದುಶ್ಚಟಗಳಿಗೆ ಮಾರುಹೋಗದೇ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ-ಡಾ.ಎಸ್.ವಿ.ಪಾಟೀಲ್

Facebook
X
WhatsApp
Telegram

ಬೀದರ.01.ಆಗಸ್ಟ್.25:- ಯುವಕರು ಮಧ್ಯಪಾನ, ತಂಬಾಕು, ಗುಟುಕಾ ಹಾಗೂ ಇನ್ನಿತರ ದುಶ್ಚಟಗಳಿಗೆ ಮಾರುಹೋಗದೇ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಬೀದರ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಸಲಹೆ ನೀಡಿದರು.


ಅವರು ಶುಕ್ರವಾರದಂದು ತೋಟಗಾರಿಕಾ ಮಹಾವಿದ್ಯಾಲಯ, ಬೀದರನಲ್ಲಿ ರಾಷ್ಟ್ರೀಯ ಸೇವಾ ಯೋಜನೆಘಟಕ, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ವತಿಯಿಂದ ಶ್ರೀ ಮ.ನಿ.ಪ್ರ.ಡಾ. ಮಾಹಾಂತ ಶಿವಯೋಗಿಗಳ ಜನ್ಮದಿನೋತ್ಸವ ನಿಮಿತ್ಯ “ವ್ಯಸನ ಮುಕ್ತ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮೊದಲು ನಾವು ಚನ್ನಾಗಿದ್ದರೆ ನಮ್ಮ ಸುತ್ತಲಿನವರುಚನ್ನಾಗಿರುತ್ತಾರೆಂದು ಹೇಳಿದರು. ದುವ್ರ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆಅರಿವು ಮೂಡಿಸಿ, ಮನಸ್ಸು, ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯರೂಪದಲ್ಲಿ ಸಂಗ್ರಹಿಸಿ “ಮಹಾಂತ ಜೋಳಿಗೆ” ಎಂಬ ವಿಶಿಷ್ಟ ಪರಿಕಲ್ಪನೆ ಮೂಲಕ ದೇಶ, ವಿದೇಶಗಳಲ್ಲಿ ಜನರದುಶ್ಚಟ ಬಿಡಿಸುವಲ್ಲಿ ಶ್ರೀಗಳು ಸಫಲರಾಗಿದ್ದರು. 

ತಮ್ಮ ಜೋಳಿಗೆಯನ್ನು ಹಿಡಿದು ಶ್ರೀಗಳು ಗ್ರಾಮ, ನಗರ ಸೇರಿದಂತೆರಾಜ್ಯಾದ್ಯಂತ ಸಂಚಾರ ನಡೆಸಿದ್ದರು. ಸಾವಿರಾರುಜನತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಮುಕ್ತಿ ಪಡೆದಿದ್ದರು.ಶ್ರೀಗಳ ಶ್ರಮದಿಂದ ಸಾವಿರಾರುಜನ ಮದ್ಯಪಾನ, ಬೀಡಿ, ಸಿಗರೇಟ್ ಇತ್ಯಾದಿಗಳನ್ನು ತ್ಯಜಿಸಿರುತ್ತಾರೆ.ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ, ಬರೀ ನಾವು ಮಹಾತ್ಮರ ದಿನಾಚರಣೆಗಳನ್ನು ಆಚರಿಸಿದರೆ ಸಾಲದು ನುಡಿದಂತೆ ನಡೆದರೆ ಮಾತ್ರ ಇಂತಹ ಆಚರಣೆಗಳ ಸಾರ್ಥಕವಾಗುತ್ತದೆಂದರು.

ಕಾರ್ಯಕ್ರಮದಲ್ಲಿ ವ್ಯಸನ ಮುಕ್ತ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಮಹಾವಿದ್ಯಾಲಯದ ಎಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಬ್ರಿಮ್ಸ್ ಆಸ್ಪತ್ರೆಯ ಮನೋ ವೈದ್ಯ ಡಾ.ಅಮಲಾ ಷರೀಫ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!