
ಹನೂರು.01.ಆಗಸ್ಟ್.25:- ಪಟ್ಟಣದ ಶ್ರೀ ಜಿ ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೂಗೋಳ ಶಾಸ್ತ್ರದ ಉಪನ್ಯಾಸಕ ಶಿವಕುಮಾರ್ ಕೆ. ರವರು ತಮ್ಮ ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಂಡಿದ್ದಾರೆ.
ಇವರು ಪರಿಸರದ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತಿದ್ದು” ಪರಿಸರ ಸಂರಕ್ಷಣೆಯನ್ನು ಮಾಡಿದರೆ ದೇಶವನ್ನೇ ಸಂರಕ್ಷಣೆ ಮಾಡಿದಂತೆ “ಎಂಬ ತತ್ವ ವನ್ನು ಅಳವಡಿಸಿಕೊಂಡಿದ್ದು ಇವರ ಹುಟ್ಟಿದ ದಿನದಂದೂ ತಮ್ಮ ಕಾಲೇಜಿನ ಸುತ್ತಮುತ್ತ ಸುಮಾರು 41 ಗಿಡಗಳನ್ನ ನೆಡುವ ಮೂಲಕ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಹಾಗೆಯೇ ಈ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೋಟ್ಸ್ ಗಳನ್ನ ನೀಡಿ ಮಾದರಿ ಉಪನ್ಯಾಸಕರಾಗಿದ್ದಾರೆ.
ಹುಟ್ಟುಹಬ್ಬವನ್ನು ದುಂದುವೆಚ್ಚಮಾಡಿ ಆಚರಿಸಿಕೊಳ್ಳುವುದಕ್ಕಿಂತ ಇಂತಹ ಜನಪ್ರಿಯ ಕಾರ್ಯಗಳನ್ನು ಮಾಡಿ ಆಚರಿಸಿಕೊಳ್ಳಬೇಕು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ ಉಪನ್ಯಾಸಕರಾದ ಲಾಜರಸ್ ನಂಜುಂಡಯ್ಯ ಪರನ ಬೇಗಮ್. ಕುಸುಮ .ಹರೀಶ್ .ಮಹೇಂದ್ರ ಲಿಂಗರಾಜ್, .ಕಲಾವತಿ, ನಂದಿನಿ, ದೇವಿಕಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
