02/08/2025 2:22 AM

Translate Language

Home » ಲೈವ್ ನ್ಯೂಸ್ » KSRTC ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ!

KSRTC ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ!

Facebook
X
WhatsApp
Telegram

ಬೀದರ್.30.ಜುಲೈ.25:- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ರಸ್ತೆ ಬಸ್ ಭಾಲ್ಕಿ ಘಟಕಕ್ಕೆ ಸೇರಿದ ಬಸ್ ಸಂಖ್ಯೆ KA 38, F1031 ಬಸ್ ಭಾಲ್ಕಿಯಿಂದ ಕಮಲನಗರ ಮಾರ್ಗವಾಗಿ ಉದಗೀರ ಕಡೆಗೆ ತೆರಳುತ್ತಿದ್ದ ಕಮಲನಗರ ತಾಲೂಕಿನ ಸಾವಳಿ ಗ್ರಾಮದ ಬಳಿ ಘಟನೆ ಜರುಗಿದೆ ಕಂದಕಕ್ಕೆ ಉರುಳಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಬೀದರ್-ಕಮಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.

ಎದುರಿನಿಂದ ತೆಲಂಗಾಣ ಸಾರಿಗೆ ಬಸ್ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಸ್ ಉರುಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆದ್ದಾರಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ರಸ್ತೆಯ ಒಂದೇ ಭಾಗದಿಂದ ಸಂಚಾರ ನಡೆಯುತ್ತಿದೆ. ಇದರಿಂದ ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ಬಸ್‌ನಿಂದ ತಪ್ಪಿಸಲು ಹೋಗಿ ರಸ್ತೆ ಬದಿಯ ಮುಳ್ಳಿನ ಗಿಡಗಳಲ್ಲಿ ಉರುಳಿದೆ ಎಂದು ತಿಳಿದು ಬಂದಿದೆ.

ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಬಂದಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ, ನಿರ್ವಾಹಕ ಸೇರಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ ಎಂದು ಭಾಲ್ಕಿ ಬಸ್‌ ಘಟಕ ವ್ಯವಸ್ಥಾಪಕ ಭದ್ರಪ್ಪಾ ಮಾಹಿತಿ ನೀಡಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!