02/08/2025 2:20 AM

Translate Language

Home » ಲೈವ್ ನ್ಯೂಸ್ » ಬೆಳೆ ವಿಮೆ ನೋಂದಣಿಗೆ ಆಗಸ್ಟ್.11 ಕೊನೆಯ ದಿನಾಂಕ

ಬೆಳೆ ವಿಮೆ ನೋಂದಣಿಗೆ ಆಗಸ್ಟ್.11 ಕೊನೆಯ ದಿನಾಂಕ

Facebook
X
WhatsApp
Telegram

ಬೀದರ.30.ಜುಲೈ.25:- 2025-26ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂಕೋಸು, ಹಸಿ ಮೆಣಸಿನಕಾಯಿ (ನೀ), ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮೆ ನೊಂದಣಿ ಮಾಡಲು ದಿನಾಂಕ: 11-08-2025 ಕೊನೆಯ ದಿನಾಂಕವಾಗಿದೆ ಎಂದು ಬೀದರ (ಜಿಲ್ಲಾ ಪಂಚಾಯತ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೆಳೆ ಸಾಲ ಪಡೆಯದ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆ ನೊಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂಘೋಷಿತ ದೃಡೀಕರಣ ಪತ್ರ ಒಳಗೊಂಡಂತೆ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸುವುದು. ಹವಾಮಾನ ಅಂಶಗಳಾದ ಮೆಳೆ ಪ್ರಮಾಣ, ಗಾಳಿಯ ವೇಗ, ಆಧ್ರ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮೆಳೆಮಾಪನ ಕೇಂದ್ರಗಳಲ್ಲಿ ದಾಖಲಿಸು ಅಂಶಗಳ ಆಧಾರದ ಮೇಲೆ ವಿಮೆ ನಷ್ಟವನ್ನು ತಿರ್ಮಾನಿಸಲಾಗುತ್ತದೆ.


ಬೀದರ ಜಿಲ್ಲೆಗೆ ಎಐಸಿ ವಿಮಾ ಕಂಪನಿ ಆಯ್ಕೆಯಾಗಿದ್ದು, ಬೆಳೆಗಳ ಹೆಸರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ: ಹೂಕೋಸು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 62,000 ರೂ. ಪಾವತಿಸಬೇಕಾದ ವಿಮಾ ಕಂತಿನ ದರ 3,100 ರೂ.., ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 71,000 ರೂ., ಪಾವತಿಸಬೇಕಾದ ವಿಮಾ ಕಂತಿನ ದರ 3,550 ರೂ.,  ಶುಂಠಿ ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 1,30,000 ರೂ. ಪಾವತಿಸಬೇಕಾದ ವಿಮಾ ಕಂತಿನ ದರ 6,500 ರೂ.., ಹಾಗು ಮಾವು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 80,000 ರೂ. ಪಾವತಿಸಬೇಕಾದ ವಿಮಾ ಕಂತಿನ ದರ 4,000 ರೂ..
       ಪ್ರಸ್ತುತ ಸಾಲಿನಲ್ಲಿ ಯೋಜನೆವಾರು ಮತ್ತು ಬೆಳೆವಾರು ವಿವರಗಳನ್ನು ಆನ್‍ಲೈನ್ ಪೋರ್ಟಲ್ (www.samrakshane.karnataka.gov.in)  ಮೂಲಕ ನೊಂದಾಯಿಸಲು ಎಲ್ಲಾ ಬ್ಯಾಂಕ್‍ನ ಶಾಖೆಗಳಲ್ಲಿ ಸದರಿ ಸೌಲಭ್ಯಗಳ ಒದಗಿಸಲಾಗಿದ್ದು ತಮ್ಮ ಹತ್ತಿರ ಬ್ಯಾಂಕ ಶಾಖೆಗಳಲ್ಲಿ ವಿಮೆ ಮಾಡಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಹಾಗೂ ತಮ್ಮ ಗ್ರಾಮ ಪಂಚಾಯತಗೆ ಅನುಮೋದನೆಯಾದ ಬೆಳೆಗಳ ಬಗ್ಗೆ ತಿಳಿಯಲು ತಮಗೆ ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಛೇರಿಗಳಿಗೆ / ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂರ್ಪಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!