ಬೀದರ.30.ಜುಲೈ.25:- ಬೀದರ ಚಿಂಚೋಳಿ ರೋಡಿನ ಮೇಲೆ ಕಾಡವಾದ ಗ್ರಾಮದ ಹತ್ತಿರ ದಿನಾಂಕ 21-12-2024 ರಂದು ಮಧ್ಯಾಹ್ನ 12.50 ಗಂಟೆಗೆ ಸುಮಾರಿಗೆ ಅಂದಾಜು 55-6 ವರ್ಷ ವಯಸ್ಸಿನ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆಎ-38/ಎನ್-0380 ನೇದ್ದರ ಚಾಲಕ ತನ್ನ ಕಾರ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಅಪಘಾತ ಮಾಡಿದ್ದರಿಂದ ಭಾರಿಗಾಯವಾಗಿ ಮೃತಟ್ಟಿದ್ದು ಇರುತ್ತದೆ ಈವರೆಗೆ ಮೃತ ವ್ಯಕ್ತಿ ಹೆಸರು, ವಿಳಾಸ ಹಾಗೂ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ.
ಈ ಕುರಿತು ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ. 107/2024 ಕಲಂ 281 106 ಬಿ.ಎನ್.ಎಸ್. ಪ್ರಕರಣ ದಾಖಲಾಗಿರುತ್ತದೆ. ಮೃತ ವ್ಯಕ್ತಿ ದುಂಡು ಮುಖ ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು ಇದ್ದು, ಬಿಳಿ ಬಣ್ಣದ ಉದ್ದ ದಾಡಿ ಇದ್ದು, ಮೈಮೇಲೆ ಹಸಿರು ಬಣ್ಣದ ಕಪ್ಪು ಪಟ್ಟಿ ಇರುವ ಬನಿಯಾನ, ಚಾಕಲೇಟ ಬಣ್ಣದ ಪ್ಯಾಂಟ ಹಾಗೂ ಕಪ್ಪು ಬಣ್ಣದ ಅಂಡರವೆಯರ ಧರಿಸಿರುತ್ತಾರೆ. ಈ ಮೃತ ವ್ಯಕ್ತಿಯ ವಾರಸುದಾರರು ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ಗ್ರಾಮೀಣ ವೃತ್ತ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.