ಯಳಂದೂರು.30.ಜುಲೈ.25:- ತಾಲ್ಲೂಕಿನ ಕೆಸ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ಸಿದ್ದರಾಜು ಬಿ ರವರು ಉಪಾಧ್ಯಕ್ಷರಾಗಿ ಲಲಿತಮ್ಮರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿ ಸಿದ್ದರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಮ್ಮ ರವರು ಮಾತ್ರ ನಾಮಪತ್ರ ಸಲ್ಲಿಸಿದರು ಇವರ ಪ್ರತಿಸ್ಪರ್ಧಿಗಳು ಯಾರು ನಾಮಪತ್ರ ಸಲ್ಲಿಸಿದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ನೂತನ ಅಧ್ಯಕ್ಷ ಬಿ ಸಿದ್ದರಾಜು ಮಾತನಾಡಿ. ಕೆಸ್ತೂರು ಹಾಲು ಉತ್ಪಾದಕರ ಸಂಘವನ್ನು ಎಲ್ಲಾ ನಿರ್ದೇಶಕರ ಸಲಹೆಯ ಮೇರೆಗೆ ಮುನ್ನೆಡಿಸುತ್ತೇವೆ.
ರೈತರು ಮತ್ತು ಹಾಲು ಉತ್ಪಾದಕರ ಹಿತಾಸಕ್ತಿ ಕಾಪಾಡುವುದೇ ನಮ್ಮ ಗುರಿಯಾಗಿದೆ.
ನಮ್ಮ ಸಹಕಾರ ಸಂಘಕ್ಕೆ ಹೆಚ್ಚು ಹೆಚ್ಚು ಷೇರುದಾರರನ್ನಾಗಿ ಮಾಡುತ್ತೇವೆ.ನಮ್ಮ ಸಂಘವು ಜಿಲ್ಲೆಯಲ್ಲಿಯೇ ಮಾದರಿಯಾಗಿರುವಂತೆ ಎಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ.
ಗುಣಮಟ್ಟ ಹಾಲು ಪೂರೈಕೆಯನ್ನು ನಾವು ಮಾಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲಲಿತಮ್ಮ, ನಿರ್ದೇಶಕರುಗಳಾದ ಚಿಕ್ಕಸಿದ್ದಶೆಟ್ಟಿ, ಮಂಜುನಾಥ್, ಗುರುಸ್ವಾಮಿ, ಪ್ರಭುಸ್ವಾಮಿ, ರಂಗಮ್ಮ, ಹಾಗೂ ಮುಖಂಡರಾದ ಬಸವಣ್ಣಪ್ಪ, ಶಾಂತಪ್ಪ, ನಾಗರಾಜಪ್ಪ, ಮಹೇಶ್ ಎಸ್, ಮಧು ಕೆಸ್ತೂರು,ನಾಗರಾಜು ಬಿ, ನಾಗರಾಜು ಎಂ, ನಾಗೇಶ್, ಗ್ರಾಪಂ ಸದಸ್ಯ ಮಹೇಶ್, ಪ್ರಸಾದ್,ರಾಜು, ದೊರೆಸ್ವಾಮಿ, ಸಹಕಾರ ಸಂಘದ ಅಧಿಕಾರಿ ಸುಭಾಷಣಿ, ಕಾರ್ಯದರ್ಶಿ ಸಿದ್ದಶೆಟ್ಟಿ ಹಾಗೂ ಇತರರು ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
