ಚಾಮರಾಜನಗರ.24.ಜುಲೈ.25:- ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭೀಮನ ಅಮವಾಸ್ಯೆ ಜಾತ್ರಾ ಮಹೋತ್ಸವವು ಗುರುವಾರ ಬಾರಿ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆಯಿಂದಲೆ ಮಹದೇಶ್ವರಸ್ವಾಮಿಗೆ ಧಾರ್ಮಿಕ ಕಾರ್ಯಗಳು ನಡೆಯಿತು. ಬೆಳಿಗ್ಗೆ 10 ರಿಂದಲೇ ದೇವಾಲಯದ ಆಲದ ಮರಗಳ ತೋಪಿನಲ್ಲಿ ಮಾದಪ್ಪನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯ ಆರಂಭವಾಗಿ ಸಂಜೆ 7 ತನಕ ನಡೆಯಿತು.
ಸುತ್ತಲಿನ ಗ್ರಾಮಗಳಿಂದ 50 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಹರಿದು ಬಂದು ದೇವರನ್ನು ಸ್ಮರಿಸಿ ಪ್ರಸಾದವನ್ನು ಸ್ಪೀಕರಿಸಿ ಧನ್ಯರಾದರು.
ವರ್ಷ ವರ್ಷ ಅಧಿಕ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ ಎತ್ತ ನೋಡಿದರೂ ಜನರು.
ಪಟ್ಟಣದಿಂದ ಕಂದಹಳ್ಳಿ ಗ್ರಾಮಕ್ಕೆ ಜನರು ಕಾಲ್ನಡಿಗೆಯಲ್ಲಿ ಸಾಗಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಆಟೋ, ದ್ವಿಚಕ್ರ ವಾಹನಗಳು ಅಧಿಕವಾಗಿರುವುದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಭದ್ರತೆಯನ್ನು ಒದಗಿಸುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಹಾಗೇಯೆ ಕೆಸ್ತೂರು, ಕಟ್ಟೆಗಣಿಗನೂರು ಗ್ರಾಮಗಳಲ್ಲಿಯೂ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನಸಂತರ್ಪನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಂದಹಳ್ಳಿ ಗ್ರಾಮದ ಎಲ್ಲಾ ಕೋಮಿನ ಯಜಮಾನರು ಹಾಗೂ ವಿವಿಧ ಗ್ರಾಮದ ಯಜಮಾನರು ಮುಖಂಡರು ಹಾಗೂ ಭಕ್ತಾದಿಗಳು ಹಾಜರಿದ್ದರು
