03/08/2025 12:32 AM

Translate Language

Home » ಲೈವ್ ನ್ಯೂಸ್ » ಯೂರಿಯಾ ರಸಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ: ಜಂಟಿ ಕೃಷಿ ನಿರ್ದೇಶಕರು
ಕೊಪ್ಪಳ

ಯೂರಿಯಾ ರಸಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ: ಜಂಟಿ ಕೃಷಿ ನಿರ್ದೇಶಕರು
ಕೊಪ್ಪಳ

Facebook
X
WhatsApp
Telegram


ಕೊಪ್ಪಳ.24.ಜುಲೈ 25: ಕೊಪ್ಪಳ ಜಿಲ್ಲೆಯಲ್ಲಿ ಏಪ್ರಿಲ್ ರಿಂದ ಜುಲೈವರೆಗೆ ಯೂರಿಯಾ ರಸಗೊಬ್ಬರದ ಬೇಡಿಕೆ 31,252 ಮೆಟ್ರಿಕ್ ಟನ್ ಆಗಿದ್ದು, ಈ ವಿರುದ್ಧ 33,459 ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನು ಹೊಂದಲಾಗಿದೆ. ಇದರಲ್ಲಿ 28,757 ಮೆಟ್ರಿಕ್ ಟನ್ ರಸಗೊಬ್ಬರವನ್ನು ವಿತರಣೆ ಮಾಡಲಾಗಿದೆ. ಇನ್ನುಳಿದ 4,702 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಲಭ್ಯವಿದೆ.


ಈ ವಾರ  National Fertilizers Limited (NFL), Coromandel International Limited (CIL)  ಹಾಗೂ  Kribhco Fertilizer Limited     ಕಡೆಯಿಂದ ಒಟ್ಟು 3,136.73 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಪೂರೈಕೆ ಮಾಡಲಾಗಿದೆ. ಈ ಪೂರೈಕೆಯಿಂದ ಕೊಪ್ಪಳ ತಾಲ್ಲೂಕಿಗೆ 629.03 ಟನ್, ಕುಷ್ಟಗಿ ತಾಲ್ಲೂಕಿಗೆ 269.95 ಟನ್, ಯಲಬುರ್ಗಾ ತಾಲ್ಲೂಕಿಗೆ 421.70 ಟನ್, ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ಭಾಗಗಳಿಗೆ 1,816.05 ಟನ್ ರಸಗೊಬ್ಬರವನ್ನು ಪೂರೈಸಲಾಗಿದೆ. ಯೂರಿಯಾ ರಸಗೊಬ್ಬರದ ಪೂರೈಕೆ ಹಂತ ಹಂತವಾಗಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ 5,000 ಮೆಟ್ರಿಕ್ ಟನ್  SPIC, MFL    ಮತ್ತು  RCF     ಕಂಪನಿಗಳಿAದ ಇನ್ನೂ ಹೆಚ್ಚಿನ ಪೂರೈಕೆ ನಿರೀಕ್ಷಿಸಲಾಗಿದೆ.


ರೈತರು ಯಾವುದೇ ಆತಂಕಕ್ಕೊಳಗಾಗದೇ, ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸುವುದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆಯೂ ಸಾಧ್ಯ. ಅಲ್ಲದೇ, ರೈತರು ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸುವಾಗ ಮಾರಾಟಗಾರರು ಖರೀದಿ ಬಿಲ್ ನೀಡದೇ ಇರುವುದು ಅಥವಾ ಮೌಲ್ಯಕ್ಕಿಂತ ಹೆಚ್ಚು ದರದಲ್ಲಿ ಮಾರಾಟ ಮಾಡುವುದನ್ನು ಕಂಡುಬoದಲ್ಲಿ, ತಕ್ಷಣವೇ ಸಹಾಯಕ ಕೃಷಿ ನಿರ್ದೇಶಕರಾದ ಜೀವನಸಾಬ, ಕೊಪ್ಪಳ: 8277922143, ನಾಗರಾಜ ಕಾತರಕಿ, ಕುಷ್ಟಗಿ: 8277922109, ಪ್ರಮೋದ ತುಂಬಾಳ, ಯಲಬುರ್ಗಾ: 8277922107, ಸಂತೋಷ ಪಟ್ಟದಕಲ್, ಗಂಗಾವತಿ: 8277922106, ಸುನೀಲ್ ಕುಮಾರ ಎಂ. ಟಿ., (ಜಾರಿದಳ) ಕೊಪ್ಪಳ: 8277932117 ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!