03/08/2025 12:34 AM

Translate Language

Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಹೋರಾಟಕ್ಕೆ ರಾಜ್ಯದ ಮಠಾಧೀಶರ ಬೆಂಬಲ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ರಾಜ್ಯದ ಮಠಾಧೀಶರ ಬೆಂಬಲ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ

Facebook
X
WhatsApp
Telegram

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ರಾಜ್ಯದ ಮಠಾಧೀಶರ ಬೆಂಬಲ: ತೋಂಟದ ಶ್ರೀ ಬದುಕು ಬೀದಿಗೆ ಬರುವ ಮುನ್ನ ಸರ್ಕಾರ ಎಚ್ಚರಗೊಳ್ಳಲಿ

ಗದಗ.23.ಜುಲೈ.25:- ಅತಿಥಿ ಉಪನ್ಯಾಸಕರು ಎರಡು ದಶಕದಿಂದ  ಸೇವೆ ಸಲ್ಲಿಸುವಾಗ ಏಳದ ಆರ್ಹತೆಯ ಪ್ರಶ್ನೆ ಈಗೇಕೆ? ಅತಿಥಿ ಉಪನ್ಯಾಸಕ ಬದುಕು ಬೀದಿಗೆ ಬೀಳುವ ಪ್ರಸಂಗ ಬಂದರೆ ಸರಕಾರಕ್ಕೆ ತಿಳಿ ಹೇಳುತ್ತೇವೆ. ಅಗತ್ಯ ಬಿದ್ದರೆ ರಾಜ್ಯದ ಎಲ್ಲ ಮಠಾಧೀಶರು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ಜ.ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ನಗರದ ಮತದ ತೋಂಟದಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿಥಿ ಉಪನ್ಯಾಸಕರ ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಹದಿನೈದು ವರ್ಷಗಳಿಂದ ಅರ್ಹತೆ ಇಲ್ಲದವರಿಂದ ಪಾಠ ಮಾಡಿಸಿದ್ದು ಸರಕಾರದ ಮಹಾ ತಪ್ಪು. ಈಗ ಅವರನ್ನು ಅನರ್ಹ ఎందు ತಿರಸ್ಕರಿಸುವುದು ಸಮಂಜಸವಲ್ಲ. ಹೋರಾಟದ ನೆಲದಲ್ಲಿ ಚಳವಳಿಯ ಹೆಜ್ಜೆ ಶುರುವಾಗಿದ್ದು, ಅತಿಥಿ ಉಪನ್ಯಾಸಕರ ಎಲ್ಲ ಬೇಡಿ ಕೆಗಳು ಈಡೇರಲಿ, ಬದುಕು-ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ಅತಿಥಿ ಉಪನ್ಯಾಸಕರ ಹೋರಾಟಕ್ಕೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟಸಳ ಸಂಪೂರ್ಣ ಬೆಂಬಲ ನೀಡುವೆ. ಬೆಳಗಾವಿ ಅಧಿವೇ ಶನದ ವೇಳೆ ಅತಿಥಿ ಉಪನ್ಯಾಸಕರ ಹೋರಾಟ ಸರಕಾರವನ್ನೇ ನಡುಗಿಸಿತ್ತು ಎಂದು ಸ್ಮರಿಸಿದರು. ಪ್ರತಿ ಸಮಸ್ಯೆಗೆ ಪರಿಹಾರ ಇದ್ದೇ ಇದೆ.

ಕಾನೂನು ತೊಡಕಿದ್ದರೆ ಬಗೆಹರಿಸುವ ಇಚ್ಛಾಶಕ್ತಿ ಸರಕಾರಕ್ಕೆ ಬೇಕು. ಈ ಬಗ್ಗೆ ವಿಶೇಷ ಕಾನೂನು ನಿಯಮ ರೂಪಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಸರಕಾರ ಆ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಹೇಳುತ್ತಾ ಸಮಯ ದೂಡುವುದಲ್ಲ.

ಉನ್ನತ ಶಿಕ್ಷಣ ಇಲಾಖೆ ಹೀಗೇ ಹೇಳುತ್ತಾ ಸಹಸ್ರಾರು ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಹರಿ ಹಾಯ್ದರು. ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ ನಿ ಮಾತನಾಡಿ, ಸರಕಾರ ಕಳೆದೆರಡು ವರ್ಷಗಳಿಂದ ಅತಿಥಿ ಉಪನ್ಯಾಸಕರಲ್ಲೇ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕಿದೆ. ಸಿಎಂ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವರು ಅತಿಥಿ ಉಪನ್ಯಾಸಕರ ಪರವಾಗಿದ್ದರೂ ಅವರನ್ನು ದಾರಿ ತಪ್ಪಿಸುವ ಕೆಲಸ ಕೆಲವರಿಂದ ಆಗುತ್ತಿದೆ. ಕೂಡಲೇ ಶೈಕ್ಷಣಿಕ ಅರ್ಹತೆ ಮುಂದಿಟ್ಟುಕೊಂಡು ಮಾಡುತ್ತಿರುವ ತಾರತಮ್ಯ ನೀತಿಕ್ಕೆ ಬಿಡಬೇಕು.

ಎಲ್ಲರಿಗೂ ಅನ್ವಯವಾಗುವಂತೆ ಈ ಹಿಂದಿನಂತೆ ಸಾಮಾನ್ಯ ಕೌನ್ಸೆ ಲಿಂಗ್ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಸರಕಾರಿ ನೌಕರರ ಸಂಘದ ಜಿಲ್ಲೆಯ ನೂತನ ಅಧ್ಯಕ್ಷ ಬಳ್ಳಾರಿಯವರನ್ನು ಸತ್ಕರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಉಪನ್ಯಾಸಕರು ಪಾಲ್ಗೊಂಡಿದ್ದರು. ತೋಂಟದಾರ್ಯ ಮಠದಿಂದ ಸಚಿವರ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಗಣ್ಯರು ಚಾಲನೆ ನೀಡಿದರು. ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಶೇಷ ಕಾನೂನು ರೂಪಿಸಿ ಸದನದ ಎರಡು ಮನೆಗಳಲ್ಲಿ ಮಸೂದೆ ಅಂಗೀಕಾರಗೊಳಿಸಿದರೆ ಸಮಸ್ಯೆ ಇತ್ಯರ್ಥ ಆಗುತ್ತೆ. ಸರಕಾರ ಮನಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಉನ್ನತ ಶಿಕ್ಷಣ ಇಲಾಖೆ ಸಚಿವರು ಅತಿಥಿ ಉಪನ್ಯಾಸಕರ ವಿರುದ್ದ ಇಲ್ಲ. ಆದರೆ ಯಾರು ವಿರೋಧಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನಿಯಮ 72ರಡಿ ಅರ್ಧ ಗಂಟೆ ಚರ್ಚಿಸಲು ಪರಿಷತ್‌ ನಲ್ಲಿ ಒತ್ತಾಯಿಸುತ್ತೇನೆ. 1 ಎಸ್.ವಿ.ಸಂಕನೂರು, ವಿಧಾನ ಪರಿಷತ್ ಸದಸ್ಯ

ಅತಿಥಿ ಉಪನ್ಯಾಸಕರನ್ನು ಕೋರ್ಟ್‌ಗೆ ಹೋಗುವಂತೆ ಪುಸಲಾಯಿಸುವ ಕೆಲವರು, ವಕೀಲರನ್ನು ಉದ್ಧಾರ ಮಾಡುತ್ತಾ, ತಾವೂ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೂಡಲೇ ಇಂಥವು ನಿಲ್ಲಬೇಕು. ಈ ಹಿಂದಿನಂತೆ ಜನರಲ್ ಕೌನ್ಸೆ ಲಿಂಗ್ ಆಗಬೇಕು. ಜನರಲ್ ಕೌನ್ಸೆ ಲಿಂಗ್ ಮೂಲಕ ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಸೇವೆ ಕಾಯಂಗೊಳಿಸಬೇಕು. ಬೇಡಿಕೆ ಈಡೇರುವವರೆಗೂ ವಿರಮಿಸುವುದಿಲ್ಲ. ಇದು ಹೋರಾಟದ ಒಂದು ಹೆಜ್ಜೆ ಮಾತ್ರ. ಹೋರಾಟದ ಹಾದಿ ದೊಡ್ಡದಿದೆ. 1…. ಡಾ.ಹನುಮಂತಗೌಡ ಕಲ್ಮನಿ, ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!