03/08/2025 12:17 AM

Translate Language

Home » ಲೈವ್ ನ್ಯೂಸ್ » ಟೈಗರ್ ಈಜ್ ರೋರಿಂಗ್, ಪಿಕ್ಚರ್ ಅಭೀ ಬಾಕಿ ಹೈ: ಡಾ. ಹನಮಂತಗೌಡಾ ಕಲ್ಮನಿ

ಟೈಗರ್ ಈಜ್ ರೋರಿಂಗ್, ಪಿಕ್ಚರ್ ಅಭೀ ಬಾಕಿ ಹೈ: ಡಾ. ಹನಮಂತಗೌಡಾ ಕಲ್ಮನಿ

Facebook
X
WhatsApp
Telegram

ಬೆಂಗಳೂರು.22.ಜುಲೈ.25:- ರಾಜ್ಯ ಹುಲಿ ನಿಧಾನವಾಗಿ ಚಲಿಸುತ್ತಿದೆ ಎಂದರೆ ಭೇಟೆಯಾಡಲು ಸಿದ್ದವಾಗುತ್ತಿದೆ ಎಂದರ್ಥ, ಭೇಟೆಯಾಡುವ ಕಲೆ ಎಲ್ಲಾ ಪ್ರಾಣಿಗಳಿಗೆ ಕರಗತವಾಗಿರುವುದಿಲ್ಲ, ಆದರೆ ಹುಲಿ, ಸಿಂಹ, ಚಿರತೆ ಭೇಟೆಯಾಡುವುದರಲ್ಲಿ ತರಭೇತಿ ನೀಡುವ ಮಾರ್ಸ್ಟ ಗಳಿದ್ದಂತೆ. ಅವು ಭೇಟೆಗಿಳಿದರೆ ಮಿಸ್ ಆಗೋ ಚಾನ್ಸ ಇಲ್ಲ.ಅಂತಹ ಭೇಟೆಗಾಗಿ ಕರ್ನಾಟಕ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ ಫೀಲ್ಡಿಗಿಳಿದಿದ್ದಾರೆ.

ಈ ಹಿಂದೆ ಮಾಡಿದ ಕೆಲವು ಹೋರಾಟಗಳಲ್ಲಿ ಜಯಶೀಲರಾಗಿ அ ನಿರ್ಣಾಯಕ ಕದನಕ್ಕೆ ಶಂಖಮೊಳಗಿಸುತ್ತಿದ್ದಾರೆ. ರಾಜ್ಯದ ಅಧಿಕ ನಾಲ್ಕುನೂರಾ ನಲವತ್ತಕ್ಕಿಂತ ಸರಕಾರಿ ಪದವಿಕಾಲೇಜುಗಳಲ್ಲಿ ಸುಮಾರು ಹತ್ತುಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಸುಮಾರು ಹದಿನೈದಿಪ್ಪತ್ತು ವರ್ಷಗಳಿಂದ ಭದ್ರತೆಯಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಯಾವ ತಾರತಮ್ಯ ಮಾಡದೆ ಸಕಲ ಅತಿಥಿ ಉಪನ್ಯಾಸಕರನ್ನೂ ಸೇವೆಗೆ ಸೇರಿಸಿಕೊಂಡು ಉದ್ಯೋಗ ಭದ್ರತೆ ನೀಡಿ ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂಬ ನ್ಯಾಯೋಚಿತ ಬೇಡಿಕೆಯೊಂದಿಗೆ ಮಂಗಳವಾರ ಅಂದರೆ 22/7/2025 ರಂದು ಗದಗದಲ್ಲಿ ಪ್ರತಿಭಟನೆ ಮಾಡಲು ಕರೆಕೊಟ್ಟಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ತಂಡೋಪತಂಡವಾಗಿ ಅತಿಥಿ ಉಪನ್ಯಾಸಕರು ಆಗಮಿಸಿ ಹೋರಾಟವನ್ನು ಯಶಸ್ವಿಗೊಳಿಸಿ ಸರಕಾರದ ಮೇಲೆ ಒತ್ತಡವನ್ನೇರಿ ವಿವಿದ ರಾಜ್ಯಗಳಲ್ಲಿ ಭದ್ರತೆ ನೀಡಿದಂತೆ ನಮಗೂ ಭದ್ರತೆ ನೀಡಿ ಎಂದು ಕೇಳಲು ವೇದಿಕೆಯನ್ನು ನಿರ್ಮಿಸಿದ್ದಾರೆ. ಟೀಕೆ, ಟಿಪ್ಪಣೆಗಳಿಗೆ, ಅಡೆತಡೆಗಳಿಗೆ ಕೊನೆಮೊಳೆಯೊಡೆದು ಉಪನ್ಯಾಸಕರ ಬದುಕಿಗೆ ಶಾಶ್ವತ ಭದ್ರತೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

ಅವರೊಂದಿಗೆ ಸಮಾನ ಮನಸ್ಕ ಅತಿಥಿ ಉಪನ್ಯಾಸಕರು ಕೈಜೋಡಿಸಿದರೆ ಬೇಡಿಕೆ ಈಡೇರುವುದರಲ್ಲಿ ಅನುಮಾನವಿಲ್ಲ. ವೇತನದಲ್ಲಿ ಹೆಚ್ಚಳ, ಹಿಡಿಗಂಟು, ಮಹಿಳಾ ಉಪನ್ಯಾಸಕಿಯರಿಗೆ ಹೆರಿಗೆ ರಜೆ, ಸಾಂದರ್ಭಿಕ ರಜೆ, ಆರೋಗ್ಯ ವಿಮೆ ನೀಡಬೇಕು ಮತ್ತು ಕಾಲೇಜುಗಳಲ್ಲಿನ ಪ್ರಾಂಶುಪಾಲರು, ಸಹ, ಸಹಾಯಕ ಪ್ರಾಧ್ಯಾಪಕರ ಮಲತಾಯಿಧೋರಣೆಗಳ ಅಂತ್ಯಕ್ಕಾಗಿ ಆಗ್ರಹಿಸಿ ಹಲವು ಹೋರಾಟಗಳನ್ನು ಮಾಡಿದ್ದಾರೆ. ಅದರಲ್ಲಿ ಹಲವು ಈಡೇರಿವೆ ಕೆಲವು ಬಾಕಿ ಉಳಿದಿವೆ. ಈಗ ಅವೆಲ್ಲವುಗಳನ್ನೂ ಪಡೆದು ನೆಮ್ಮದಿಯ ಬದುಕನ್ನು ಸಾಗಿಸಬೇಕಾದರೆ ಈ ಮಾಡು ಇಲ್ಲವೆ ಮಡಿ ಹೋರಾಟ ಯಶಸ್ವಿಯಾಗಬೇಕಾಗಿದೆ.

ಹೋರಾಟ, ಅವರವರ ಇದು ಒಬ್ಬರ ಹೋರಾಟವಲ್ಲ ಇದು ಎಲ್ಲರ ಭದ್ರ ಬದುಕಿಗಾಗಿನ ಹೋರಾಟ. ಸರಕಾರಗಳು ಜಾಣಕುರುಡುತನವನ್ನು ಪ್ರದರ್ಶಿಸಿ ಬಡ ಅತಿಥಿ ಉಪನ್ಯಾಸಕರನ್ನು ಬೀದಿಗೆ ಹಾಕುವ ಹುನ್ನಾರ ನಡೆಸಿದೆ. ಈ ನರಕಯಾತನೆಯಿಂದ ಮುಕ್ತರಾಗಲು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕಾಗಿದೆ. ಒಂದುಕಡೆಯಿಂದ ಕಾನೂನಿನ ಮೂಲಕವೂ ಹೋರಾಟ ನಡೆದಿದೆ. ఎల్ల ಬಾದಿತ ಈ ಎಲ್ಲಾ ಯಾತನೆಗಳಿಂದ ಬಂಧಮು ಕ್ತರಾಗಲು ಸಂಘಟಿತ ಹೋರಾಟವೊಂದೇ ಪರಿಹಾರವಾಗಿದೆ.

ಉಪನ್ಯಾಸಕರು ಹೋರಾಡಿ ನ್ಯಾಯ ಪಡೆದರೆ ಎರಡುವರೆ ದಶಕಗಳ ಜೀತಕ್ಕೆ ಅಭದ್ರತೆಯ ಬದುಕಿಗೆ ತಿಲಾಂಜಲಿ ಬೀಳಲಿದೆ. ಅವರವರ ಭವ್ಯಬದುಕಿನ ಬಾಗಿಲನ್ನು ತೆರೆಯುವ ಬೀಗದ ಕೈ ಈ ಹೋರಾಟವಾಗಲಿದೆ.ಗೆದ್ದರೆ ಕಲ್ಮನಿಯವರ ಹೆಸರು ಸೂರ್ಯಚಂದ್ರಾರ್ಕವಾಗಿ ಉಳಿಯಲಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!