ಬೀದರ.22.ಜುಲೈ.25:-” ಬೀದರ್ ದಕ್ಷಿಣ ಮೀನುಗಾರರ ವಿಭಾಗದ ಕುಪೇಂದ್ರ.ಎಸ್.ಹೊಸಮನಿ ನೇಮಕ”
ದಿನಾಂಕ 20.07.2025 ರಂದು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಖೇಣಿ ರ ವರ ನಿದೇಶನದ ಮೇರಗೆ ಶೀ ಕುಪೇಂದ್ರ ತಂದೆ ಸುಂದರ ಯಾಕತಪೂರ ಅವರನು ಬೀದರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮೀನುಗಾರ ವಿಭಾಗದ ಬೀದರ ದಕ್ಷಿಣ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿ ಸನ್ಮಾನಿಸಿದರು.

ತಾವು ಕೂಡಲೇ ತಮ್ಮ ಅಧಿಕಾರವನ್ನು ವಹಿಸಿಕೊoಡು ಬೀದರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಹಾಗೂ ಮೀನುಗಾರರ ವಿಭಾಗದ ಏಳಿಗೆಗಾಗಿ ಶ್ರಮಿಸುವo ತ ಸೂಚಿಸಿದರು ಈ ದಿಶೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ದೊರೆಯಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ್ ಚಂದನ್ ಶೆಟ್ಟಿ . ಕರೀಮ್ ಸಾಬ್ . ಮೀನುಗಾರರ ವಿಭಾಗೀಯ ಜಿಲ್ಲಾಧ್ಯಕ್ಷರಾದ
ಸುನಿಲ್ ಕುಮಾರ್ ಕಾಶಂಪುರ. ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾದ ಖೈರೋದ್ದೀನ್. ಎಸಿ.ಘಟಕದ ಜಿಲ್ಲಾ ಕಾರ್ಯದರ್ಶಿಗಳಾದ ಲೋಕೇಶ್ ಮಂಗಲಗಿ. ಅಲ್ಪಸಂಖ್ಯಾತರ ವಿಭಾಗದ ದಕ್ಷಿಣ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸಿರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
