ಬೀದರ.21.ಜುಲೈ.25:- ಔರಾದ ಶಾಸಕ ಮಾಜಿ ಸಚಿವ ಪ್ರಭು ಚೌಹಾಣ್ ಆರೋಪಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ನನ್ನ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ ರಾಜಕೀಯವಾಗಿ ನನ್ನ ಮುಗಿಸಬೇಕೆಂದು ಪಿತೂರಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೀದರ್ ನಗರದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಇತ್ಯರ್ಥವಾಗಿದ್ದರೂ ರಾಜಕೀಯ ಷಡ್ಯಂತ್ರದಿಂದಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ.
ಖೂಬಾರನ್ನು ನಾನು ಸಾಯೋತನಕ ಬಿಡಲ್ಲ ಎಂದು ಶಪಥ ಮಾಡಿದ್ದರು. ಈ ಪ್ರಕರಣದ ಹಿಂದೆ ಭಗವಂತ್ ಖೂಬಾ ಕೈಯಿದೆ. ಹುಡುಗಿ ಬಗ್ಗೆ ಏನು ಇಲ್ಲಾ ಸಮಸ್ಯೆ ಇಲ್ಲಾ. ಇದು ನಮ್ಮ ವಿರುದ್ಧ ಮಾಡಿರುವ ಕೆಲಸ ಎಂದು ಖೂಬಾ ಫೋಟೊ ತೋರಿಸಿ ಚೌಹಾಣ್ ಕಿಡಿಕಾರಿದ್ದಾರೆ.
2013 ಸೇರಿದಂತೆ ಕೆಲವು ಬಾರಿ ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವರಿಂದ ದೋಖಾ ಆಗಿದ್ದು, ಅವರು ಮುಂದೆ ಬರಲ್ಲಾ. ಹಿಂದೆ ಪಿತೂರಿ ಮಾಡತ್ತಾರೆ. ಇದರಲ್ಲಿ ನಮ್ಮ ಮಗಳೂ ಇದ್ದಾಳೆ. ಆದರೆ, ಅವರಿಗೆ ಆಮಿಷೆ ತೋರಿಸಿದ್ದಾರಾ ಏನು ಗೊತ್ತಿಲ್ಲ. ನೂರಕ್ಕೆ ನೂರು ನಾನು ಸಾಯೋತನಕ ಈ ಟೀಂನ ಬಿಡಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.