07/08/2025 11:04 PM

Translate Language

Home » ಲೈವ್ ನ್ಯೂಸ್ » IBPS ಐ.ಬಿ.ಪಿ.ಎಸ್‌ನಲ್ಲಿ 5208 ಹುದ್ದೆಗಳಿಗೆ ಅರ್ಜಿ ಅಹ್ವಾನ.

IBPS ಐ.ಬಿ.ಪಿ.ಎಸ್‌ನಲ್ಲಿ 5208 ಹುದ್ದೆಗಳಿಗೆ ಅರ್ಜಿ ಅಹ್ವಾನ.

Facebook
X
WhatsApp
Telegram

IBPS  ಐ.ಬಿ.ಪಿ.ಎಸ್‌ನಲ್ಲಿ 5208 ಹುದ್ದೆಗಳು 208 11 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮೊದಲ ಬಾರಿಗೆ ವ್ಯಕ್ತಿತ್ವ ಪರೀಕ್ಷೆಯ ಜೊತೆಯಲ್ಲಿ , ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳು ಇಲ್ಲಿವೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಗಳನ್ನು ಆಯ್ಕೆ ಮಾಡಲಿದೆ. ಒಟ್ಟು ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 783, ಪರಿಶಿಷ್ಟ ಪಂಗಡಕ್ಕೆ 365, ಹಿಂದುಳಿದ ವರ್ಗದವರಿಗೆ 1337, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 520 ಹಾಗೂ ಸಾಮಾನ್ಯ ವರ್ಗದವರಿಗೆ 2,204 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆನ್‌ಲೈಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 21, 2025 ಕೊನೆ ದಿನ.

ಯಾವ ಬ್ಯಾಂಕ್, ಎಷ್ಟು ಹುದ್ದೆಗಳು ?:

ಕೆನರಾ ಬ್ಯಾಂಕ್ 1000,

ಪಂಜಾಬ್-ಸಿಂಥ್ ಬ್ಯಾಂಕ್ 358,

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 500,

ಬ್ಯಾಂಕ್ ಆಫ್ ಇಂಡಿಯಾ 700,

ಪಂಜಾಬ್ ನ್ಯಾಷನಲ್ ಬ್ಯಾಂಕ್ 200,

ಇಂಡಿಯನ್ ಓವರಸೀಸ್ ಬ್ಯಾಂಕ್ 450,

ಬ್ಯಾಂಕ್ ಆಫ್ ಮಹಾರಾಷ್ಟ್ರ 1000,

ಬ್ಯಾಂಕ್ ಆಫ್ ಬರೋ ಡಾ 1000,

ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ನೆನಪಿಡಿ:

ಮುಖ್ಯವಾಗಿ ಯುಕೋ/ಯೂನಿಯನ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಈ ವರ್ಷದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಇನ್ನು ತಿಳಿಸಿಲ್ಲ ಹಾಗೂ ಇನ್ನು ಹಲವು ಬ್ಯಾಂಕ್‌ಗಳು ಬ್ಯಾಕಲಾಗ್ ಹುದ್ದೆಗಳನ್ನು ನಂತರದ ದಿನದಲ್ಲಿ ಸೇರಿಸಬಹುದು.ಈ ಕಾರಣದಿಂದ ಅಪ್ಲಾಯ್ ಮಾಡದೇ ಇರಬೇಡಿ. ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗೆ ಲಿಂಕ್:

ಅಧಿಕೃತ ವೆಬ್

-www.ibps.in ibps.in/wp-content/uploads/Detailed-Notification_ CRP-PO-XV.pdf ಜಾಲತಾಣ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು https:// ibpsreg.ibps.in/crppoxvjun25/

ಶೈಕ್ಷಣಿಕ ಅರ್ಹತೆ (21.07.2025ಕ್ಕೆ ಅನ್ವಯಿಸುವಂತೆ):

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ:

ತತ್ಸಮಾನ ವಿದ್ಯಾರ್ಹತೆ. ವಯೋಮಿತಿ: 01.07.2025ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳಿಗಿಂತ ಹೆಚ್ಚಿರಬಾರದು.

ಅಂದರೆ ಅಭ್ಯರ್ಥಿಗಳು 02.07.1995 ಕ್ಕಿಂತ ಮುಂಚಿತವಾಗಿ ಮತ್ತು 01.07.2005ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಗಮನಕ್ಕೆ:

ಅಂಕಣದಲ್ಲಿ ಪ್ರಸ್ತುತಪಡಿಸಿದ ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಲೇಖಕರು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಆದಾಗ್ಯೂ, ವಿಷಯದ ಸಂಪೂರ್ಣತೆ, ನಿಖರತೆ ಅಥವಾ ಸಮಯೋಚಿತತೆಯನ್ನು ಖಾತರಿಪಡಿಸುವುದಿಲ್ಲ, ಹಾಗಾಗಿ ಅರ್ಜಿ ಸಲ್ಲಿಸುವ ಮೊದಲು ಆಯಾಯ ವೈಬ್‌ಸೈಟ್ ನೋಡಿ ಖಚಿತಪಡಿಸುವುದು ಉತ್ತಮ. ಯಾವುದೇ ಲೋಪದೋಷಗಳಿಗಳಿಗೆ ಪತ್ರಿಕೆ ಇಲ್ಲವೇ ಲೇಖಕರು ಜವಾಬ್ದಾರರಲ್ಲ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD