ಕೊಪ್ಪಳ.18.ಜುಲೈ.25: ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ನಿವಾಸಿ ಹುಸೇನಪ್ಪ ತಂದೆ ಯಮನಪ್ಪ ಈಳಿಗೇರ ಎಂಬ 82 ವರ್ಷದ ವ್ಯಕ್ತಿಯು 2025 ರ ಮಾರ್ಚ್ 26 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 75/2025 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ: ವ್ಯಕ್ತಿಯು 5.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಸಾದಗಪ್ಪು ಮೈಬಣ್ಣ ಹಾಗೂ ತಲೆಯಲ್ಲಿ ಬಿಳಿಯ ಕೂದಲುಗಳಿವೆ. ಏರು ಹಣೆ, ಕೋಲು ಮುಖ ಹೊಂದಿದ್ದಾರೆ. ಕನ್ನಡ ಮತ್ತು ಅಲ್ಪಸ್ವಲ್ಪ ಹಿಂದಿ ಭಾಷೆ ಮಾತನಾಡುತ್ತಾರೆ. ಎದೆಯ ಮೇಲೆ ಬಿಳಿಯ ತನ್ನು ಇದೆ (ಬಲಗಡೆ ಕೈಗೆ ಬೆಳ್ಳಿಯ ಕಡಗ ಧರಿಸಿರುತ್ತಾರೆ). ಕಾಣೆಯಾದಾಗ ಬಿಳಿ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು.
ಮೇಲ್ಕಂಡ ಚಹರೆಯ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08539-220333, 9480803749, ಕೊಪ್ಪಳ ಕಂಟ್ರೋಲ್ ರೂಮ್ ನಂ.08539-230100 ಮತ್ತು 230222 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆ ಕೋರಿದೆ.