04/08/2025 5:09 PM

Translate Language

Home » ಲೈವ್ ನ್ಯೂಸ್ » ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ- ಸಿಇಓ ವರ್ಣಿತ್ ನೇಗಿ

ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ- ಸಿಇಓ ವರ್ಣಿತ್ ನೇಗಿ

Facebook
X
WhatsApp
Telegram

ಕೊಪ್ಪಳ.16.ಜುಲೈ.25: ಕೃಷಿ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಹಾಗಾಗಿ ಕೃಷಿ ಪರಿಕರ ಮಾರಾಟಗಾರರಾದ ತಾವೇ ರೈತರ ಸಂಪೂರ್ಕದಲ್ಲಿ ಹೆಚ್ಚಾಗಿ ಇರುವುದರಿಂದ ತರಬೇತಿ ಅವಧಿಯಲ್ಲಿ ತಾವು ಕಲಿತ ವಿಷಯಗಳ ಮಾಹಿತಿಯನ್ನು ರೈತರಿಗೆ ಸರಿಯಾಗಿ ತಿಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.

ಅವರು ಬುಧವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ. ಪಟೇಲ್ ಸಭಾಂಗಣದಲ್ಲಿ ಮ್ಯಾನೇಜ ಹೈದ್ರಾಬಾದ್ ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ. ಕೃಷಿ ಇಲಾಖೆ ಕೊಪ್ಪಳ. ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತಾರಣಾ ಸೇವೆಗಳ ಡಿಪ್ಲೊಮಾ ಕೋರ್ಸ್ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳಲ್ಲಿ ಬಂದು ಮಾಹಿತಿ ಕೇಳುವುದಕ್ಕಿಂತ ಹೆಚ್ಚಾಗಿ ಕೃಷಿ ಪರಿಕರಗಳ ಮಾರಾಟಗಾರರಿಂದಲೆ ಅವರು ಮಾಹಿತಿ ಪಡೆಯುತ್ತಾರೆ ಆದ್ದರಿಂದ ಅವರಿಗೆ ಎಷ್ಟು ಪ್ರಮಾಣದಲ್ಲಿ ಹೊಲಗಳಿಗೆ ಬೀಜ. ಗೊಬ್ಬರ ಹಾಗೂ ಕೀಟನಾಶಕಗಳನ್ನು ಉಪಯೋಗಿಸಬೇಕು ಎನ್ನುವ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರಾಧ್ಯಾಪಕರು ಹಾಗೂ ರಾಜ್ಯ ನೋಡಲ್ ಅಧಿಕಾರಿಗಳು ಸಮೇತಿ ಉತ್ತರ. ಕೃಷಿ ವಿಶ್ವವಿದ್ಯಾಲಯ ಧಾರವಾಡದ ಡಾ. ಎಸ್. ಎನ್ . ಜಾಧವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 2025- 26 ನೇ ಸಾಲಿನಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ದೇಶಿ ಪ್ರಮಾಣಪತ್ರಗಳನ್ನು ಕೊಡುವ ಕೆಲಸ ಮಾಡಿದ್ದೆವೆ. ಈ ತರಬೇತಿ ಅವಧಿಯಲ್ಲಿ ಕೃಷಿ. ತೋಟಗಾರಿಕೆ ಸೇರಿದಂತೆ ಇತರೆ ಸಮಗ್ರ ಬೆಳೆಗಳ ಮಾಹಿತಿ ತಾವೆಲ್ಲರೂ ಪಡೆದಿದ್ದಿರಿ. ಪ್ರಮಾಣ ಪತ್ರ ಪಡೆದ ನಂತರ ತಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಕೆಲಸ ತಾವು ಮಾಡಬೇಕೆಂದು ಹೇಳಿದರು.

ವಿಸ್ತಾರಣಾ ನಿರ್ದೆಶಕರು ಮತ್ತು ನಿರ್ದೆಶಕರು ಸಮೇತಿ ಉತ್ತರ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಡಾ. ಎಂ.ವಿ ಮಂಜುನಾಥ ಅವರು ಮಾತನಾಡಿ, 48 ವಾರಗಳ ದೇಶಿ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸಿ ಪ್ರಮಾಣ ಪತ್ರ ಪಡೆಯುತ್ತಿದ್ದಿರಾ ತರಬೇತಿ ಅವಧಿಯಲ್ಲಿ ಮಣ್ಣಿನ ಫಲವತ್ತತೆ. ಸಮಗ್ರ ಕೃಷಿ ಪದ್ದತಿ ಜಾನುವಾರುಗಳು.

ತೋಟಗಾರಿಕೆ ಬೆಳೆಗಳು. ಹನಿ ನೀರಾವರಿ ಸೇರಿದಂತೆ ಇತರೆ ಹಲವಾರು ಮಾಹಿತಿಗಳನ್ನು ತಮಗೆ ನೀಡಲಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಪರಿಕರಗಳನ್ನು ನೀಡುವುದರ ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಿ ಗೊತ್ತಾದರೆ ಅವರಿಗೆ ಸರಿಯಾದ ಮಾಹಿತಿ ನೀಡಿ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕೆಂದು ಹೇಳಿದರು.

ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಉಪಾಧ್ಯಕ್ಷರಾದ ವೀರಣ್ಣ ಕಮತರ ಮಾತನಾಡಿ, ಕೃಷಿ ಇಲಾಖೆ, ವಿಶ್ವವಿದ್ಯಾಲಯ ರೈತರ ಕೊಂಡಿಯಾಗಿ ಕೆಲಸ ನಿರ್ವಹಿಸಲು ಈ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸತತ 4 ವರ್ಷಗಳ ಬಿಎಸ್ಸಿಯಲ್ಲಿ ಕಲಿತ ವಿಷಯಗಳನ್ನು ತಮಗೆ 48 ವಾರಗಳಲ್ಲಿ ಉಣಬಡಿಸಲಾಗಿದೆ. ರೈತರ ನೆಮ್ಮದಿ ಜೀವನಕ್ಕೆ ನಮ್ಮೆಲ್ಲರ ಚಿಂತನೆ ಇರಬೇಕು. ಪ್ಯಾರಾ ವಿಸ್ತರಣಾ ವೃತ್ತಿಪರರು ಎಂದು ತಮಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ರೈತರ ಜೊತೆಗೆ ತಮ್ಮೆಲ್ಲರ ಜವಾಬ್ದಾರಿ ಅತ್ಯಮೂಲ್ಯವಾಗಿದೆ ಎಂದು ಹೇಳಿದರು.


ಕೃಷಿ ಇಲಾಖೆಯ ಜಂಟಿ ನಿರ್ದೆಶಕರು ಹಾಗೂ ಅಧ್ಯಕ್ಷರು ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳದ ಟಿ.ಎಸ್. ರುದ್ರೇಶಪ್ಪ ಅವರು ಮಾತನಾಡಿ, ಮ್ಯಾನೇಜ ಸಂಸ್ಥೆ ಗ್ರಾಮೀಣ ಅಭಿವೃದ್ಧಿ, ಬ್ಯಾಂಕಿಂಗ್, ಕೃಷಿಗೆ ತರಬೇತಿ ನೀಡುವ ದೇಶದ ಅತಿದೊಡ್ಡ ಸಂಸ್ಥೆಯಾಗಿದೆ ಕೃಷಿ ಪರಿಕರಗಳ ಮಾರಾಟಗಾರರಿಗೆ 48 ದಿನಗಳಲ್ಲಿ 2 ಬ್ಯಾಚಗಳಿಗೆ ತರಬೇತಿ ನೀಡಲಾಗಿದೆ. ತಾವು ರೈತರು ಹಾಗೂ ಇಲಾಖೆಯ ಕೊಂಡಿಯಾಗಿ ಕೆಲಸಮಾಡಬೇಕು. ಕೃಷಿಯಲ್ಲಿ ತಮ್ಮ ಸೇವೆ ಅತ್ಯವಶ್ಯಕವಾಗಿದೆ. ಜಿಲ್ಲೆಯಲ್ಲಿ ತಮ್ಮ ಮೂಲಕ ರೈತರಿಗೆ ರಸಗೊಬ್ಬರ, ಬೀಜ, ಕೀಟನಾಶಕಗಳ ನಿರ್ವಹಣೆ ಕುರಿತು ಸರಿಯಾದ ಮಾಹಿತಿ ರೈತರಿಗೆ ಸಿಕ್ಕರೆ ತಮಗೂ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.

48 ದಿನಗಳ ತರಬೇತಿ ಪಡೆದ 80 ಕೃಷಿ ಪರಿಕರಗಳ ಮಾರಾಟಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಿ. ಪ್ರಮಾಣ ವಚನ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪನಿರ್ದೆಶಕರಾದ ಸಿದ್ದೇಶ್ವರ ಎಲ್., ಮೀನುಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಡಾ. ಶ್ರೀ ನಿವಾಸ ಕುಲಕರ್ಣಿ, ಕೃಷಿ ತರಬೇತಿ ಕೇಂದ್ರ ಗಂಗಾವತಿ ಸಹಾಯಕ ಕೃಷಿ ನಿರ್ದೆಶಕರಾದ ಡಾ. ಚಂದ್ರಕಾಂತ ನಾಡಗೌಡ, ಫೆಸಿಲಿಟೇಟರ್ ಜಂಬಣ್ಣ ಐಲಿ, ಮಹೇಶ್ವರ ಶಾಸ್ತ್ರಿ ಹಾಗೂ ಕೃಷಿ ಪರಿಕರ ಮಾರಾಟಗಾರರು ಸೇರಿದಂತೆ ಕೃಷಿ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD