ಬೀದರ.16.ಜುಲೈ.25:- ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆ ವತಿಯಿಂದ ಜುಲೈ.18 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಚಿಟಗುಪ್ಪಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಕುಂದು ಕೊರತೆ/ಅಹವಾಲು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಇನ್ಸಪೇಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಣ ಸಾರ್ವಜನಿಕರು ತಮಗೆ ಆಗಬೇಕಾದ ಕೆಲಸಗಳಲ್ಲಿ ವಿಳಂಭ ಮಾಡುತ್ತಿದ್ದರೆ ಅಥವಾ ಅಧಿಕಾರಿಗಳು ನ್ಯಾಯ ಸಮ್ಮತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ತೊಂದರೆ ಕೊಡುತ್ತಿದ್ದರೆ ಸಭೆಯಲ್ಲಿ ತಮ್ಮ ಕುಂದು ಕೊರತೆಗಳನ್ನು ನೇರವಾಗಿ ಬಂದು ಸಲ್ಲಿಸಲು ಅಥವಾ ಸ್ಥಳದಲ್ಲಿಯೇ ದೂರು ಅರ್ಜಿ ಫಾರಂ ನಂ. 1 ಮತ್ತು 2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದೆ, ಸಾರ್ವಜನಿಕರು ಇದರ ಸದುಇಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಬೀದರ ಮೊಬೈಲ್ ಸಂಖ್ಯೆ: 9364062571, ಪೊಲೀಸ್ ನಿರೀಕ್ಷಕರು-2 ಕರ್ನಾಟಕ ಲೋಕಾಯುಕ್ತ ಬೀದರ ಮೊಬೈಲ್ ಸಂಖ್ಯೆ: 9364062675 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.