ಬೀದರ.16.ಜುಲೈ.25:- 2025-26ನೇ ಸಾಲಿಗೆ ಕೇಂದ್ರ ಸರ್ಕಾರದ ವಿಕಲಚೇತನರ ವ್ಯಕ್ತಿಗಳ ಸಬಲೀಕರಣ ಇಲಾಖೆಯ ವಿಶೇಷಚೇತನ (ದಿವ್ಯಾಂಗಜನ) ವಿದ್ಯಾರ್ಥಿಗಳಿಗೆ ಪ್ರೀ ಮೆಟ್ರಿಕ್ ಹಾಗೂ ಪೋಸ್ಟರ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಬೀದರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ವಿಕಲಚೇತನ ವಿದ್ಯಾರ್ಥಿಗಳು National Scholarship Portal ನಲ್ಲಿ ಪ್ರೀ ಮೆಟ್ರಿಕ್ ಆಗಸ್ಟ್.31, ಪೋಸ್ಟ್ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿದ್ಯಾರ್ಥಿ ವೇತನಕ್ಕೆ ಅಕ್ಟೋಬರ್.10 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಒಂದು ಪ್ರತಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮೈಲೂರ ಬೀದರ ಇಲ್ಲಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-234647 ಹಾಗೂ ಜಿಲ್ಲೆಯ ಎಂ.ಆರ್.ಡಬ್ಲೂ್ಯ.
ವಿ.ಆರ್.ಡಬ್ಲೂ್ಯ. ಹಾಗೂ ಯು.ಆರ್.ಡಬ್ಲೂ್ಯ.ಗಳು ತಮ್ಮ ಗ್ರಾಮ ಪಂಚಾಯತ, ನಗರ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.