ಬೀದರ.16.ಜುಲೈ.25:- ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸಾಕಷ್ಟು ಸಮಸ್ಯೆಗಳು ಕಂಡುಬಂದಿದ್ದು, ಅವುಗಳೆಲ್ಲವುಗಳ ಪಟ್ಟಿ ಮಾಡಿ ವರದಿ ತಯಾರಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಬನಸೋಡೆ ತಿಳಿಸಿದರು.
ಅವರು ಮಂಗಳವಾರ ಬೀದರ ನಗರದ ನೌಬಾದ, ಮುಸ್ಲಿಂಗಲ್ಲಿ, ಲಾಲಬಾಗ, ಕಪಲಾಪೂರ, ಅತಿವಾಳ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಹಳಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ರಜಿಸ್ಟರಗಳು ಬರೆಯದೇ ಇರುವುದು ಕಂಡುಬಂದಿರುತ್ತದೆ. ಶೌಚಾಲಯಗಳು ಇದ್ದರು ಸಹ ನೀರಿನ ವ್ಯೆವಸ್ಥೆ ಇರಲಿಲ್ಲ, ಹಾಜರಾತಿ ಪಸ್ತಕದಲ್ಲಿ ಕಾಣಿಸಿದ್ದ ಸಂಖ್ಯೆಯಷ್ಟು ಮಕ್ಕಳು ಇರಲಿಲ್ಲ, ಬಹಳಷ್ಟು ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿರುವುದಿಲ್ಲ. ಅಡುಗೆ ಕೋಣೆಗಳ ಕೊರತೆ ಕಂಡುಬಂದಿರುತ್ತದೆ.

ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ ವ್ಯೆವಸ್ಥೆ ಇದ್ದಿರುವುದಿಲ್ಲ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕಂಡುಬಂದಿರುವುದಿಲ್ಲ. ಮಕ್ಕಳಿಗೆ ಆಟವಾಡಲು ಆಟದ ಮೈದಾನವು ಕಂಡುಬಂದಿರುವುದಿಲ್ಲ. ಶುದ್ಧ ಕುಡಿಯುವ ನೀರಿನ ಕೊರತೆ ಕಂಡುಬಂದಿರುತ್ತದೆ. ಕಪಲಾಪೂರ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರು ಮತ್ತು ಮಕ್ಕಳು ಇಲ್ಲದೇ ಇರುವುದು ಕಂಡುಬಂದಿರುತ್ತದೆ ಎಂದರು.