04/08/2025 3:20 PM

Translate Language

Home » ಲೈವ್ ನ್ಯೂಸ್ » ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ‘ಗಣಿತ ಗಣಕ’ ಕಾರ್ಯಕ್ರಮ ಚಾಲನೆ : ರಾಜ್ಯ ಸರ್ಕಾರದ ಆದೇಶ.!

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ‘ಗಣಿತ ಗಣಕ’ ಕಾರ್ಯಕ್ರಮ ಚಾಲನೆ : ರಾಜ್ಯ ಸರ್ಕಾರದ ಆದೇಶ.!

Facebook
X
WhatsApp
Telegram

ಬೆಂಗಳೂರು.15.ಜುಲೈ.25:- ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ಗಣಿತ ಗಣಕ’ ಕಾರ್ಯಕ್ರಮ ಅನುಷ್ಠಾನ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

2024-25ನೇ ಸಾಲಿನ ಆಯವ್ಯಯ ಭಾಷಣದ ಘೋಷಣೆಯಂತೆ ‘ಗಣಿತ ಗಣಕ” ಕಾರ್ಯಕ್ರಮವನ್ನು 17 ಜಿಲ್ಲೆಗಳ 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ 14,711 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 3 ರಿಂದ 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6,99,705 ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಗೆ ಆಸಕ್ತಿ ಅಭಿವೃದ್ಧಿಸಿ ಶಿಕ್ಷಕರು ಶಾಲಾ ಅವಧಿಯ ನಂತರ ಪೋನ್ ಕರೆಯ ಮೂಲಕ (ರಿಮೋಟ್ ಟ್ಯೂಟರಿಂಗ್) ವಿದ್ಯಾರ್ಥಿಗಳಿಗೆ ಪೋಷಕರನ್ನು ತೊಡಗಿಸಿಕೊಂಡು ಗಣಿತದ ಮೂಲ ಕ್ರಿಯೆಗಳನ್ನು ವೃದ್ಧಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮದ ಯಶಸ್ಸು ಹಾಗೂ ಪರಿಣಾಮಕತೆಯನ್ನು ಪರಿಗಣಿಸಿ, ಇದರಿಂದ ಪೋಷಕರಿಂದ ವ್ಯಕ್ತವಾದ ಶಿಕ್ಷಕರ ಕಾಳಜಿ ಕಾರ್ಯಕ್ರಮದ ಧನಾತ್ಮಕ ಅಂಶಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಕರು ತಮ್ಮ ಕಲಿಕೆಯ ಬಗ್ಗೆ ಕಾಳಜಿವಹಿಸುತ್ತಿರುವುದು ಕಲಿಕೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆಯನ್ನು ಒದಗಿಸುತ್ತದೆ.

ಈ ಹಿನ್ನೆಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ “ಗಣಿತ ಗಣಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಮಗ್ರ ಶಿಕ್ಷಣ ಕರ್ನಾಟಕ ಪ್ರಸ್ತಾಪಿಸಿತ್ತು. 3 ರಿಂದ 5ನೇ ತರಗತಿಗಳ ಹಂತದಲ್ಲಿ ವಿದ್ಯಾರ್ಥಿಗಳು ಮೂಲ ಪರಿಕಲ್ಪನೆಗಳನ್ನು ಸಾಧಿಸಿ, ಮುಂದಿನ ಎಲ್ಲಾ ಹಂತದ ಶಿಕ್ಷಣ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಉತ್ತಮ ಸಾಧನೆ ಪ್ರದರ್ಶಿಸುವಂತೆ ಮಾಡುವುದು, ಪೋಷಕರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ 111(iii) ರಲ್ಲಿ ಈ ಕೆಳಕಂಡಂತೆ ಘೋಷಿಸಲಾಗಿರುತ್ತದೆ;
“ಗಣಿತ ಗಣಕ ಕಾರ್ಯಕ್ರಮದಡಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಮೂಲಕ ವೈಯಕ್ತಿಕ ಬೋಧನೆಯೊಂದಿಗೆ ಬುನಾದಿ ಗಣಿತ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ವಿಸ್ತರಿಸುವುದು ಎಂದು ತಿಳಿಸಿದೆ.

ಮೇಲೆ ಓದಲಾದ ಕ್ರಮಾಂಕ (2)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಈ ಮುಂದಿನಂತೆ ಪ್ರಸ್ತಾಪಿಸಿರುತ್ತಾರೆ. ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ 2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5ನೇ ತರಗತಿಗಳಲ್ಲಿ ಓದುತ್ತಿರುವ ಸುಮಾರು 13,51,642 ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಅಭಿವೃದ್ಧಿಸಿ ಮೂಲ ಗಣಿತ ಪರಿಕಲ್ಪನೆಗಳನ್ನು ಶಾಲಾ ಅವಧಿಯ ನಂತರ ಶಿಕ್ಷಕರಿಂದ ಮಕ್ಕಳಿಗೆ ಪೋನ್ ಕರೆ ಮೂಲಕ (ರಿಮೋಟ್ ಟ್ಯೂಟರಿಂಗ್) ಅರ್ಥೈಸಲಾಗುವುದು. ಸದರಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ ಶಿಕ್ಷಕರಲ್ಲಿ ಅಗತ್ಯ ಕೌಶಲ್ಯಗಳನ್ನು ವೃದ್ಧಿಸಲಾಗುವುದು.

ಈ ಸಂಬಂಧ 1, 2 ಮತ್ತು 3ನೇ ತರಗತಿಗಳಿಗೆ ನಲಿ-ಕಲಿ ಪದ್ಧತಿ ಜಾರಿಯಲ್ಲಿರುವುದರಿಂದ ತರಗತಿವಾರು ಕಲಿಕಾ ಫಲಗಳನ್ನು ಸಾಧಿಸದೆ ಕಲಿಕಾ ನ್ಯೂನ್ಯತೆ ಇರುವುದು ಕಳೆದ 5 ವರ್ಷಗಳಿಂದ ASER ಮತ್ತು NAS ಸಮಿಕ್ಷೇಯಲ್ಲಿ ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಪರಿಹಾರವಾಗಿ ಬೋಧನೆಯ ಅತ್ಯಗತ್ಯವಿರುತ್ತದೆ.

ರಾಜ್ಯಾದ್ಯಂತ ಎಲ್ಲಾ 38,548 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಮಾರು 13,51,642 ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿ ಆಸಕ್ತಿ ಹಾಗೂ ಮೂಲ ಕ್ರಿಯೆಗಳ ಕೌಶಲ್ಯವನ್ನು ಶಿಕ್ಷಕರು ಶಾಲಾ ಅವಧಿಯ ನಂತರ ಪೋನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ವೃದ್ಧಿಸಲು ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜೆ-ಪಾಲ್, ಅಲೋಕಿಟ್ ಮತ್ತು ಯೂತ್ ಇಂಪ್ಯಾಕ್ಟ್ ಸಂಸ್ಥೆಗಳ ಸಹಯೋಗದೊಂದಿಗೆ “ಗಣಿತ ಗಣಕ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಸುಮಾರು 75,000 ಶಿಕ್ಷಕರಿಗೆ ಶಾಲಾ ಅವಧಿಯ ನಂತರ ಪೋನ್ ಕರೆ ಮಾಡಲು (ರಿಮೋಟ್ ಟ್ಯೂಟರಿಂಗ್) ಪ್ರತಿ ಶಿಕ್ಷಕರಿಗೆ ರೂ.800/- ಸಹಾಯಧನವನ್ನು ಒಟ್ಟು ರೂ.600.00 ಲಕ್ಷಗಳ ಮೊತ್ತದಲ್ಲಿ ಅನುಷ್ಠಾನಗೊಳಿಸುವುದಾಗಿ ಪ್ರಸ್ತಾಪಿಸಿರುತ್ತಾರೆ. ಹಾಗೂ ಪ್ರಸ್ತಾಪಿಸಲಾದ ಮೊತ್ತವನ್ನು 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಪಿ.ಎ.ಬಿ ಅನುಮೋದಿತ ‘ಎಲಿಮೆಂಟರಿ ಟಿ.ಎಲ್.ಎಂ’ ಉಪಕ್ರಮದ ಅಡಿಯಲ್ಲಿ ಒದಗಿಸುವ ಅನುದಾನದಡಿ ಅನುಮೋದನೆಯಾಗಿರುವ ಅನುದಾನಗಳಿಂದ ಭರಿಸಬಹುದಾಗಿದೆ ಎಂದು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ತಿಳಿಸಿರುತ್ತಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

Call Us
error: Content is protected !!

Featuring Advanced Search Functions plugin by YD