10/06/2025 12:03 AM

Translate Language

Home » ಜೀಲ್ಲೆ » ವಾರ್ತಾ ಇಲಾಖೆಗೆ ವಿದ್ಯಾರ್ಥಿಗಳ ಭೇಟಿ.ಮಕ್ಕಳ ದಿನಾಚರಣೆ ಪ್ರಯುಕ್ತ ಬೀದರ ಜಿಲ್ಲಾಡಳಿತವು ಹಮ್ಮಿಕೊಂಡ ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿಗಳ ಭೇಟಿ

ವಾರ್ತಾ ಇಲಾಖೆಗೆ ವಿದ್ಯಾರ್ಥಿಗಳ ಭೇಟಿ.ಮಕ್ಕಳ ದಿನಾಚರಣೆ ಪ್ರಯುಕ್ತ ಬೀದರ ಜಿಲ್ಲಾಡಳಿತವು ಹಮ್ಮಿಕೊಂಡ ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿಗಳ ಭೇಟಿ

Facebook
X
WhatsApp
Telegram

*ವಾರ್ತಾ ಇಲಾಖೆಗೆ ವಿದ್ಯಾರ್ಥಿಗಳ ಭೇಟಿ*

ಬೀದರ, ನವೆಂಬರ್.25 :- ಮಕ್ಕಳ ದಿನಾಚರಣೆ ಪ್ರಯುಕ್ತ ಬೀದರ ಜಿಲ್ಲಾಡಳಿತವು ಹಮ್ಮಿಕೊಂಡ ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿಗಳ ಭೇಟಿ ಹಾಗೂ ಕಾರ್ಯವೈಖರಿಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಇಂದು ಅಕ್ಕಮಹಾದೇವಿ ಹೈಸ್ಕೂಲಿನ್ ವಿದ್ಯಾರ್ಥಿಗಳು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ವಾರ್ತಾ ಇಲಾಖೆಯ ದಿನಿತ್ಯದ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸರ್ಕಾರದ ಯೋಜನೆಗಳನ್ನು ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ವಾರ್ತಾ ಇಲಾಖೆ ಮಾಡುತ್ತದೆ. ಜಿಲ್ಲಾಡಳಿತದ ಸಭೆ ಸಮಾರಂಭಗಳ ಸುದ್ದಿಯನ್ನು ಪತ್ರಿಕಾ ಮಾಧ್ಯಮಗಳಿಗೆ ತಲುಪಿಸಿ ಪ್ರಕಟಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಸರಕಾರದ ಐದು ಗ್ಯಾರಂಟಿಗಳ ಕುರಿತು ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆಯೆಂದರು.
ಇದೇ ಸಂದರ್ಭದಲ್ಲಿ ಇಲಾಖೆಯ ವಿಜಯಕೃಷ್ಣ, ನರೇಶ ತಮ್ಮ ಕಾರ್ಯವನ್ನು ವಿವರಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!