05/08/2025 7:36 AM

Translate Language

Home » ಲೈವ್ ನ್ಯೂಸ್ » ಹಡಪದ ಅಪ್ಪಣ್ಣನವರ ಬದುಕು, ವಿಚಾರಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯ-ಎಡಿಸಿ ಡಾ.ಈಶ್ವರ ಉಳ್ಳಾಗಡ್ಡಿ

ಹಡಪದ ಅಪ್ಪಣ್ಣನವರ ಬದುಕು, ವಿಚಾರಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯ-ಎಡಿಸಿ ಡಾ.ಈಶ್ವರ ಉಳ್ಳಾಗಡ್ಡಿ

Facebook
X
WhatsApp
Telegram

ಬೀದರ.11.ಜುಲೈ.25:- ಹಡಪದ ಅಪ್ಪಣ್ಣನವರ ಬದುಕು ಮತ್ತೆ ವಿಚಾರಗಳು ವಚನಗಳಲ್ಲಿ ಅಡಕವಾಗಿದ್ದು, ಇಂದಿನ ಸಮಾಜಕ್ಕೆ ಅತಿ ಅವಶ್ಯಕವಾಗಿದೆ. ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತರಾಗಿದ್ದು ಕಾಯಕ ತತ್ವದಲ್ಲಿ ನಿಷ್ಠೆ ಉಳ್ಳವರಾಗಿದ್ದರೆಂದು ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.


ಅವರು ಗುರುವಾರ ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಹಿರಿಯ ಸಾಹಿತಿಗಳಾದ ಶಂಭುಲಿoಗ ವಿ.ಶಾಮಣ್ಣನವರ ಉಪನ್ಯಾಸ ನೀಡಿ ಮಾತನಾಡಿ, ವಿಜಯಪುರ ಜಿಲ್ಲೆಯ ಬಸವನಭಾಗೇವಾಡಿ ತಾಲ್ಲೂಕಿನ ಮನಬಿನಾಳ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಚನ್ನವೀರಪ್ಪ, ತಾಯಿ ದೇವಮ್ಮ ಆಗಿದ್ದರು. ಅಪ್ಪಣ್ಣನವರು ತಮ್ಮ ಕುಲ ಕಸುಬಾದ ಕ್ಷೌರ ಮಾಡುವ ಕಾಯಕವಾಗಿತ್ತು. ಕಾಯಕ ನಿಷ್ಠರಾದ ಹಡಪದ ಅಪ್ಪಣ್ಣನವರು ಲಿಂಗಮ್ಮಳನ್ನು ವಿವಾಹ ಆಗುತ್ತಾರೆ. ಬಸವಣ್ಣನವರ ಒಡನಾಡಿಗಳು ಆಪ್ತ ಕಾರ್ಯದರ್ಶಿಯು ಆಗಿ ಬಸವಣ್ಣನವರ ಲಿಂಗೈಕ್ಯ ಆಗುವವರೆಗೂ ಜೊತೆಗಿದ್ದರೆಂದರು.


ಈ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜ ಸಂಘದ ದತ್ತಾತ್ರಿ ಬಾಂದೇಕರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೊಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಹಡಪದ ಸಮಾಜದ ಯುವ ಘಟಕದ ಅಧ್ಯಕ್ಷರಾದ ಸಂಗಮೇಶ, ರವೀಂದ್ರ ಡಿಗ್ಗಿ ಸೇರಿದಂತೆ ಸಮಾಜದ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD