05/08/2025 10:23 AM

Translate Language

Home » ಲೈವ್ ನ್ಯೂಸ್ » ಮುಂದಿನ ಮೇ.2026ಕ್ಕೆ ಅನುಭವ ಮಂಟಪ ಲೋಕಾರ್ಪಣೆ – ಸಚಿವ ಈಶ್ವರ ಬಿ.ಖಂಡ್ರೆ

ಮುಂದಿನ ಮೇ.2026ಕ್ಕೆ ಅನುಭವ ಮಂಟಪ ಲೋಕಾರ್ಪಣೆ – ಸಚಿವ ಈಶ್ವರ ಬಿ.ಖಂಡ್ರೆ

Facebook
X
WhatsApp
Telegram

ಬೀದರ.09.ಜುಲೈ.25:- ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪಕ್ಕೆ ಪರಿಷ್ಕøತ ಮೊತ್ತ 742 ಕೋಟಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿಯ ಗುಣಮಟ್ಟವನ್ನು ಜಾಗರೂಕತೆ ವಹಿಸಿ ಮುಂಬರುವ ಮೇ.2026 ರೊಳಗಾಗಿ ಲೋಕಾರ್ಪಣೆಗೊಳಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಸೂಚಿಸಿದರು.


ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನೂತನ ಅನುಭವ ಮಂಟಪ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.


12ನೇ ಶತಮಾನದ ಶರಣರ ಅನುಭವ ಮಂಟಪ, ಸಂಸತ್ ಇಡೀ ದೇಶಕ್ಕೆ ಮಾತ್ರವಲ್ಲದೇ ವಿಶ್ವಕ್ಕೆ ಮಾದರಿಯಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಅನುಭವ ಮಂಟಪ ಯೋಜನೆಯು ಜಾಗತಿಕ ಮಟ್ಟದ ಸ್ಮಾರಕವಾಗಲಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ತೊಡಕು ಬಾರದಂತೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮುಂಜಾಗೃತೆ ವಹಿಸಬೇಕು. ಈತನಕ ನೆಲಮಹಡಿ ಸೇರಿ 5 ಅಂತಸ್ತಿನ ಕಟ್ಟಡಗಳು ಪೂರ್ಣಗೊಂಡಿದ್ದು ಒಟ್ಟು 271 ಕೋಟಿ ರೂ. ಖರ್ಚಾಗಿದ್ದು, ಭೌತಿಕವಾಗಿ ಶೇ.63 ರಷ್ಟು ಪ್ರಗತಿಯಾಗಿದೆ. ಅನುಭವ ಮಂಟಪದ ಪ್ರಗತಿ ಕುರಿತಂತೆ ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.


770 ಶರಣರ ವಚನಗಳನ್ನು 770 ಕಂಬಗಳಲ್ಲಿ ಕೆತ್ತುವಾಗ ವಚನಗಳನ್ನು ಹಾಗೂ ಚರಿತ್ರೆಗಳಲ್ಲಿ ಅಕ್ಷರಗಳ ಕೆತ್ತನೆಯಲ್ಲಿ ತಪ್ಪುಗಳು ಆಗದಂತೆ ಮುಂಜಾಗೃತೆ ವಹಿಸತಕ್ಕದ್ದು, ಪ್ರತಿಯೊಬ್ಬ ಶರಣರ ವಚನಗಳನ್ನು ವಿದ್ವಾಂಸರಿಂದ ಪರಿಶೀಲಿಸತಕ್ಕದ್ದು. ವಚನಗಳ ಸ್ವಷ್ಟತೆ, ಶರಣರ ಹೆಸರು, ಕಾಯಕದ ವಿವರಗಳನ್ನು ಸಹ ನುರಿತ ತಜ್ಞರ ಸಮಿತಿಯಿಂದ ಅನುಮೋದಿಸತಕ್ಕದ್ದು, ಮಕ್ಕಳಿಗೆ ಯುವಕರಿಗೆ, ಜನಸಾಮಾನ್ಯರಿಗೆ ಅರ್ಥವಾಗುವ ಮಹತ್ವದ ವಚನಗಳಿಗೆ ಆದ್ಯತೆ ನೀಡುವಂತೆ ಸಚಿವರು ಸೂಚಿಸಿದರು.


157 ಶರಣರ ಕಿರು ಚಿತ್ರಗಳನ್ನು ಉನ್ನತ ಮಟ್ಟದ ತಜ್ಞರಿಂದ ನಿರ್ಮಿಸಲಾಗುತ್ತಿದೆ. ಶರಣ ಪರಂಪರೆಯ ಆಧಾರದ ಮೇಲೆ ವಿವಿಧ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗುವುದು. ಶರಣರ ರೂಪದ ರೊಬೊಟಿಕ್ಸಗಳ ನಿರ್ಮಾಣ, ಶರಣ ಗ್ರಾಮ 7ಡಿ ಥಿಯೇಟರ್, ವಿಜ್ಞಾನ ಮ್ಯೂಸಿಯಂ ವೈಜ್ಞಾನಿಕ ಇಷ್ಟಲಿಂಗ ಶಿವಯೋಗದ ಗ್ಯಾಲರಿ ಸೇರಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರವಾಸಿಗರಿಗೆ ಅನುಕೂಲ ಆಗುವ ದೃಷ್ಠಿಯಿಂದ ತ್ರಿಸ್ಟಾರ್ ಹೋಟೇಲ್ ಕಟ್ಟಡದೊಳಗೆ ವಾಟರ ಬೋಟಿಂಗ್, ಲ್ಯಾಂಡ್ ಸ್ಕೇಪಿಂಗ್ ಕುರಿತು ಸಹ ಚರ್ಚಿಸಲಾಯಿತು.


ಬಸವಕಲ್ಯಾಣದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ತಾವು ಇತ್ತೀಚೆಗೆ ಬಸವಕಲ್ಯಾಣಕ್ಕೆ ಭೇಟಿ ನೀಡಿದಾಗ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಕಂಡುಬಂದಿದ್ದು, ರಸ್ತೆಗೆ ಕೆಕೆಆರ್‍ಡಿಬಿ ಅನುದಾನ ಒದಗಿಸಲಾಗುವುದು ಎಂದರು. ಸ್ವಚ್ಛತೆ ಕಾಪಾಡುವಂತೆ ಕಸ ವಿಲೇವಾರಿಗೆ ಒತ್ತು ನೀಡುವಂತೆ ಉಪವಿಭಾಗಾಧಿಕಾರಿ ಮುಕುಲ ಜೈನ್‍ರಿಗೆ ಸೂಚಿಸಿದರು.


ಈ ಸಭೆಯಲ್ಲಿ ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಬಿ.ಕೆ.ಡಿ.ಬಿ. ಆಯುಕ್ತ ಜಗನ್ನಾಥ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD