ಬೀದರ. ಜುಲೈ.2:- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 7ನೇ, 8ನೇ ಮತ್ತು 9 ನೇ ತರಗತಿಯಲ್ಲಿ ಖಾಲಿಯುಳಿದ ಸ್ಥಾನಗಳ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಬರುವಾಗ ಎಸ್.ಎ.ಟಿ.ಎಸ್. ನಂಬರ್, ಮಗುವಿನ ಆದಾರ ಕಾರ್ಡ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಇತ್ತಿಚಿನ ಒಂದು ಭಾವಚಿತ್ರ ತೆಗೆದುಕೊಂಡು ಬರಬೇಕು. ವಿಶೇಷ ವರ್ಗದಲ್ಲಿ ಆಯ್ಕೆ ಬಯಸುವ ಮಕ್ಕಳು ಸಂಬಂಧ ಪಟ್ಟ ಅಧಿಕಾರಿಗಳಿಂದ ಪ್ರಮಾಣ ಪತ್ರ ಸಲ್ಲಿಸಬೇಕು. ಯಾವುದೇ ವಿಶೇಷ ವರ್ಗದಲ್ಲಿ ಪ್ರವೇಶ ಪಡೆಯಬೇಕಾದರೂ ಕಡ್ಡಾಯವಾಗಿ ಅರ್ಜಿ ಸಲ್ಲಿಸಲೇಬೇಕು. ಪ್ರವೇಶ ಪರೀಕ್ಷೆ ಮತ್ತು ಸ್ಥಳದ ವಿವರ ನಂತರ ಒದಗಿಸಲಾಗುವುದು. ಆಯ್ಕೆ ಮೇರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನಡೆಯುವುದರಿಂದ ಯಾವುದೇ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು.
ಅರ್ಜಿಗಳನ್ನು ಹತ್ತಿರದ ವಸತಿ ಶಾಲೆಯಿಂದ ಅಥವಾ ಸಮಾಜ ಕಲ್ಯಾಣ ತಾಲೂಕು ಕಛೇರಿಗಳಿಂದ ಪಡೆದು, ಅರ್ಜಿಗಳನ್ನು ತುಂಬಿ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರಿಗೆ ದಿನಾಂಕ: 11-07-2025ರ ಸಂಜೆ 5:30 ರ ಒಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ವಸತಿ ಶಾಲೆ ಇಲ್ಲವೇ ಮೊಬೈಲ್ ಸಂಖ್ಯೆ: 7899998755, 9945196115, 9986850550 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.¹