ಯಳಂದೂರು.08.ಜುಲೈ.25:- ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಯುವ ಕಾಂಗ್ರೇಸ್ ಮುಖಂಡ ಬಿಳಿಗಿರಿರಂಗನ ಬೆಟ್ಟದ ಸಿ ವೆಂಕಟೇಶ್ ರವರನ್ನು ಚಾಮರಾಜನಗರ ಜಿಲ್ಲಾ ಕಾಂಗ್ರೇಸ್ ಸಮಿತಿ ಪದವೀಧರ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವೆಂಕಟೇಶ್ ಮಾತನಾಡಿ ನನ್ನನ್ನು ಜಿಲ್ಲಾ ಕಾಂಗ್ರೇಸ್ ಸಮಿತಿ ಪದವೀಧರ ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಮತ್ತು ನನ್ನ ನೆಚ್ಚಿನ ನಾಯಕರಾದ ಡಿ ಕೆ ಶಿವಕುಮಾರ್ ರವರೆಗೆ ಅಭಿನಂದನೆಗಳು ಹಾಗೂ ನಮ್ಮ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಹಾಗೂ ಸಂಸದರಾದ ಸುನೀಲ್ ಬೋಸ್ ಡಿಸಿಸಿ ಮತ್ತು ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ಪಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷರಾದ ಹೊಂಗನೂರು ಚಂದ್ರು ರವರಿಗೂ ಅಭಿನಂದನೆಗಳು.

ತಮಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ಕಾಂಗ್ರೇಸ್ ಪಕ್ಷದ ತತ್ವ, ಸಿದ್ದಾಂತ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಪಿಸಿಸಿ ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ಪದವೀಧರ ವಿಭಾಗದ ಸಂಘಟನೆ ಬಲಪಡಿಸಿ ಮತ್ತು ಈ ಮೂಲಕ ಪಕ್ಷದ ಬಲವರ್ಧನೆಯಲ್ಲಿ ಕಾರ್ಯನ್ಮೂಖವಾಗಿ ಕಾರ್ಯನಿರ್ವಹಿಸುತ್ತೇನೆಂದು ತಿಳಿಸಿದರು.
ವರದಿ. ಪ್ರಸನ್ನಕುಮಾರ್ ಕೆಸ್ತೂರು