ಬೀದರ.08.ಜುಲೈ.25:- ಕಲ್ಯಾಣ ಕರ್ನಾಟಕ ೭೭ ನೇ ವರ್ಷ ಹಾಗೂ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ತನ್ನ ಏಳನೆ ವರ್ಷ ಆಚರಣೆ ಪ್ರಯುಕ್ತವಾಗಿ ಹೋರಾಟ, ಸಾಹಿತ್ಯ ಸಂಗೀತ, ಸಂಸ್ಕೃತಿ ರಂಗಭೂಮಿ ಜಾನಪದ ಸಾಹಿತ್ಯ ಆಡಳಿತ ಸೇವೆ, ಉನ್ನತ ಶಿಕ್ಷಣ ಉನ್ನತ ಹುದ್ದೆ, ರಾಜಕೀಯ ಸೇವೆ.
ಮಾಧ್ಯಮ, ಸಂಘಟನೆ, ಜನಸೇವೆ, ಪರಿಸರ, ಯೋಗ, ವಿಕಲಚೇತನರ, ಹಿರಿಯ ನಾಗರೀಕರ, ಚಿತ್ರಕಲೆ, ಸರ್ಕಾರಿ ಸೇವಾ ನಿವೃತ್ತಿ ಸೈನಿಕ ಸೇವೆ, ಕ್ರೀಡೆ, ಕನ್ನಡ ಶಾಲೆಗಳ ಪ್ರಗತಿ, ಗ್ರಾಮೀಣ ಭಾಗದ ಪ್ರಗತಿ, ಕೊಳಚೆ ಭಾಗದ ಪ್ರಗತಿ, ಸಂಥ ಸಂಸ್ಥೆ ಟ್ರಸ್ಟ್, ಎನ್ ಜಿ ಓ ಮೂಲಕ ಮಾಡುತ್ತಿರುವ ದಶಕದ ಸೇವೆಯನ್ನು ಪರಿಗಣಿಸಿ, ಕಲ್ಯಾಣ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು ಸೇವೆ ಮತ್ತು ಸಾಧನೆ ಮಾಡಿರುವ ಹತ್ತು ಪುಟಗಳ ದಾಖಲಾತಿಗಳು, ಸಂಕ್ಷಿಪ್ತ ಮಾಹಿತಿ ಹಾಗೂ ಎರಡು ಭಾವಚಿತ್ರಗಳೊಂದಿಗೆ, ಅಂಚೆ ಮೂಲಕ ಕೋರಿಯಾರ ಮೂಲಕ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅಗಸ್ಟ ೨೫. ಕೊನೆಯದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಡಾ. ಸುಬ್ಬಣ್ಣ ಕರಕನಳ್ಳಿ ಅಧ್ಯಕ್ಷರು, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ೧೭-೪-೩೧೮/ ಸಿ ಎಂ ಸಿ ಕಾಲೋನಿ ಮೈಲೂರ ಬೀದರ ೫೮೫೪೦೩ ದೂ ಸಂಖ್ಯೆ: ೧೯೭೦೦೬೧೯೬೧ ಸಂಖ್ಯೆಗೆ ಸಂದರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಟೆಪೆಂಬರ್ ಕೊನೆಯ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜರುಗಲಿದ್ದು, ಪ್ರಶಸ್ತಿಗೆ ಆಯ್ಕೆಯಾದ ಸೇವೆಕರಿಗೆ ಸಾಧಕರಿಗೆ ಒಂದುವಾರ ಮುಂಚಿತವಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಲಾಗುವುದು.