07/07/2025 1:14 AM

Translate Language

Home » ಲೈವ್ ನ್ಯೂಸ್ » ಪಿಹೆಚ್. ಡಿ. ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಪಿಹೆಚ್. ಡಿ. ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Facebook
X
WhatsApp
Telegram

2024-25ನೇ ಶೈಕ್ಷಣಿಕ ಸಾಲಿಗೆ, ಕುವೆಂಪು ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿನ ಗಳಲ್ಲಿನ ಪಿಹೆಚ್.ಡಿ. ಸಂಶೋಧನೆಗಾಗಿ (ಪೂರ್ಣಕಾಲಿಕ ಮತ್ತು ಅಂಶಕಾಲಿಕೆ) ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶ್ವವಿದ್ಯಾಲಯದ ಪಿಹೆಚ್.ಡಿ. ನಿಯಮಾವಳಿ (ಪರಿಷ್ಕೃತ) 2017ರ ಪ್ರಕಾರ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮೆರಿಟ್. ರೋಸ್ಟರ್ ಹಾಗೂ ರಿಕ್ತಸ್ಥಾನಗಳ ಲಭ್ಯತೆ ಆಧರಿಸಿ ತಾತ್ಕಾಲಿಕ ನೋಂದಣಿ ನೀಡಲಾಗುವುದು.


ಅರ್ಜಿ ನಮೂನೆಯನ್ನು ದಿನಾಂಕ:07-07-2025 ರಿಂದ ವಿಶ್ವವಿದ್ಯಾಲಯದ ವೆಬ್ ಸೈಟ್  ನಿಂದ ಡೌನ್‌ಲೋಡ್ ಮ http://www.kuvempu.ac.inಾಡಿಕೊಂಡು ಎಲ್ಲಾ ಲಗತ್ತುಗಳೊಂದಿಗೆ ಸಂಬಂಧಪಟ್ಟ ವಿಷಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ದಿನಾಂಕ:31-07-2025 ರೊಳಗೆ ಸಲ್ಲಿಸಬಹುದಾಗಿರುತ್ತದೆ. ಉಳಿದ ವಿವರಗಳು ಈ ಕೆಳಗಿನಂತಿವೆ.

01. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂದಪಟ್ಟ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ವಿಕಲಾಂಗರು ಶೇ.50 ಅಂಕಗಳನ್ನು ಗಳಿಸಿರಬೇಕು. ಈ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

02. ಅರ್ಜಿ ಶುಲ್ಕ ರೂ. 2000/- (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.1500/-ಗಳನ್ನು ಪಾವತಿಸಿ ಜೊತೆಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸುವುದು. ಇದೇ ವರ್ಗದ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ. 2.50,000/-ಗಳು ಮೀರಿದ್ದಲ್ಲಿ ಅರ್ಜಿ ಶುಲ್ಕ ರೂ.2,000/-ಗಳನ್ನು ಪಾವತಿಸುವುದು) ಗಳನ್ನು ವಿಶ್ವವಿದ್ಯಾಲಯದ ಸಾಮಾನ್ಯ ಖಾತೆ ಸಂಖ್ಯೆ: 54023036291 ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜ್ಞಾನಸಹ್ಯಾದ್ರಿ ಶಾಖೆ (IFSC – SBIN0040759) ಇಲ್ಲಿ ಪಾವತಿಯಾಗುವಂತೆ RTGS/NEFT/ ವಿಶ್ವವಿದ್ಯಾಲಯದ ಚಲನ್ ಮೂಲಕ ಪಾವತಿಸಬಹುದಾಗಿದೆ ಅಥವಾ Finance Officer, Kuvempu University ಇವರ ಹೆಸರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜ್ಞಾನಸಹ್ಯಾದ್ರಿ ಶಾಖೆ (IFSC-SBIN0040759) ಇಲ್ಲಿ ಪಾವತಿಯಾಗುವಂತೆ ಡಿ.ಡಿ.ಯನ್ನು ಪಡೆಯಬಹುದಾಗಿದೆ. Paytm ಮೂಲಕವೂ ಪಾವತಿಸಲು ಅವಕಾಶವಿದೆ. ಶುಲ್ಕ ಪಾವತಿಸಿದ RTGS/NEFT ಪ್ರತಿ/ಚಲನ್/ಡಿ.ಡಿ.ಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು ಕಡ್ಡಾಯವಾಗಿರುತ್ತದೆ.

03. ಕರ್ನಾಟಕ ಸರ್ಕಾರದ ಆದೇಶ ಹಾಗೂ ವಿಶ್ವವಿದ್ಯಾಲಯದ ಸುತ್ತೋಲೆ ಸಂಖ್ಯೆ: ಕುವಿ:ಎಸಿ 18&2:ಪಿಹೆಚ್.ಡಿ:6723:2019-20. ದಿನಾಂಕ:06-02-2020 ರನ್ವಯ ಅಂಗವಿಕಲ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರ ಸಲ್ಲಿಸುವ ಷರತ್ತಿಗೊಳಪಟ್ಟು, ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

04. ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್/06/ಪಿಎಲ್ಎಕ್ಸ್/2012, ದಿನಾಂಕ:06-11-2023 ರನ್ವಯ ಹೈದ್ರಾಬಾದ್ ಕರ್ನಾಟಕ 371(ಜೆ) ಮೀಸಲಾತಿಯಡಿಯಲ್ಲಿ ಅಭ್ಯರ್ಥಿಗಳನ್ನು ಪಿಹೆಚ್.ಡಿ. ಪ್ರವೇಶಾತಿಗೆ ಪರಿಗಣಿಸಲಾಗಿದೆ.

05. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸುವುದಿಲ್ಲ ಹಾಗೂ ಬೇರೆ ಉದ್ದೇಶಗಳಿಗೆ ಮರು ಹೊಂದಾಣಿಕೆ ಮಾಡುವುದಿಲ್ಲ.

06. ಅರ್ಜಿಯೊಂದಿಗೆ, ಎಸ್.ಎಸ್.ಎಲ್.ಸಿ. ಮತ್ತು ಸ್ನಾತಕೋತ್ತರ ಪದವಿಯ ಅಂಕಪಟ್ಟಿ/ಘಟಿಕೋತ್ಸವ/ಮೂಲ ವಲಸೆ ಪ್ರಮಾಣ/ಪತ್ರಗಳ ಪ್ರತಿಯನ್ನು ಲಗತ್ತಿಸಬೇಕು.

07. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಪಿಹೆಚ್.ಡಿ ಕೋರ್ಸ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಮುಖ್ಯಸ್ಥರಿಂದ ನಿರಪೇಕ್ಷಣಾ ಪತ್ರವನ್ನು ಪಡೆದು ಕಡ್ಡಾಯವಾಗಿ ಲಗತ್ತಿಸಬೇಕು.

08. ವಿದೇಶಿ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.

09. ಹೆಚ್ಚಿನ ಮಾಹಿತಿ ಹಾಗೂ ರಿಕ್ತ ಸ್ಥಾನಗಳ ವಿವರಗಳಿಗಾಗಿ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸುವುದು.

10. ಅಗತ್ಯ ದಾಖಲಾತಿಗಳನ್ನು ಲಗತ್ತಿಸದ ಮತ್ತು ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

11. ವಿಶ್ವವಿದ್ಯಾಲಯ ಹೊರಡಿಸಲಾದ ಸುತ್ತೋಲೆ ಸಂಖ್ಯೆ:ಕುವಿ:ಶೈವಿ:ಪಿಹೆಚ್.ಡಿ-1:4608:2024-25,ದಿನಾಂಕ:13-02-2025ರ ಅನುಸಾರ 2024-25ನೇ ಶೈಕ್ಷಣಿಕ ಸಾಲಿನಿಂದ ಪಿಹೆಚ್.ಡಿ. ಪ್ರವೇಶಾತಿಗೆ ಸಂಬಂಧಿಸಿದಂತೆ ಆಯ್ಕೆಪಟ್ಟಿಗಳನ್ನು ಕನ್ನಡದಲ್ಲಿಯೂ ಸಹ ಪ್ರಕಟಿಸಲು ಕ್ರಮ ಕೈಗೊಳ್ಳುವುದು.

12. ವಿಶ್ವವಿದ್ಯಾಲಯದ 2-8:941:2025-26, 05:13-06-20250 2024-25ನೇ ಸಾಲಿನ ಪಿಹೆಚ್.ಡಿ.ಗೆ ಸಂಬಂಧಿಸಿದ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸತಕ್ಕದ್ದು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!