04/07/2025 9:25 PM

Translate Language

Home » ಕೊಪ್ಪಳ » ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ

ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ

Facebook
X
WhatsApp
Telegram

ಕೊಪ್ಪಳ.04.ಜುಲೈ.25: ಕೊಪ್ಪಳ ತಾಲ್ಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಸುಮಾರು 35-40 ವರ್ಷದ ವ್ಯಕ್ತಿಯು 2025 ರ ಏಪ್ರಿಲ್ 18 ರಂದು ಹುಲಿಗಿಯ ಮುದ್ದಮ್ಮನಕಟ್ಟೆ ಹತ್ತಿರ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದು, ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 19/2025 ಕಲಂ: 194 ಬಿ.ಎನ್.ಎಸ್.ಎಸ್-2023 ಅಡಿ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಕೊಪ್ಪಳ ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಗೆ ಹೋಲಿಕೆಯಾಗುವಂತಹ 35-40 ವರ್ಷ ವಯಸ್ಸಿನ ವ್ಯಕ್ತಿ ಕಾಣೆಯಾಗಿದ್ದಲ್ಲಿ ಸಂಬoಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಮುನಿರಾಬಾದ್ ಪೊಲೀಸ್ ಠಾಣೆ ಪಿ.ಎಸ್.ಐ: 08539-270333, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ: 08539-221333, ಡಿ.ಎಸ್.ಪಿ ಕೊಪ್ಪಳ ಉಪ ವಿಭಾಗ: 08539-222433, ಎಸ್.ಪಿ. ಕೊಪ್ಪಳ: 08539-230111 ಸಂಪರ್ಕಿಸಿ ಮಾಹಿತಿ ನೀಡುವಂತೆ ಮುನಿರಾಬಾದ್ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್(ಕಾ.ಸು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!