ಔರಾದ.04.ಜುಲೈ.25:- ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಿ ಶಾಲಾವಧಿಯಲ್ಲಿ ಅಕ್ರಮವಾಗಿ ವಿದ್ಯಾರ್ಥಿಗಳ ಪೋಷಕರಿಂದ ಹಣ ಪೀಕುತ್ತಿರುವ ‘ಕೋಚಿಂಗ್’ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಕೊರರ ಕೇಂದ್ರಗಳು ಔರಾದ್ ಹಾಗೂ ಕಮಲನಗರ ಪಟ್ಟಣದಲ್ಲಿ ಎಲ್ಲೆಂದರಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿವೆ.
ನವೋದಯ, ಸೈನಿಕ, ಹಾಗೂ ಮೊರಾರ್ಜಿ ವಸತಿ ಶಾಲೆಯ ಪರಿಕ್ಷಾ ಪೂರ್ವ ತರಬೇತಿ ನೆಪದಲ್ಲಿ 5ನೇ ತರಗತಿ ಮಕ್ಕಳಿಗೆ ವಿಶೇಷ ತರಬೇತಿ ನೀಡುವದಾಗಿ ಪಟ್ಟಣದ 8 ಹಾಗೂ ಕಮಲನಗರ ಪಟ್ಟಣದಲ್ಲಿ ಎರಡು ಕೋಚಿಂಗ್ ಕೇಂದ್ರಗಳು ಕೆಲಸ ಮಾಡ್ತಿವೆ. ಕಳೆದ ವರ್ಷವೂ ಈ ಅನಧಿಕೃತ ಕೇಂದ್ರಗಳಿಗೆ ನೋಟಿಸ್ ನೀಡಲಾಗಿತ್ತು ಆದರೆ ಅವರು ಮತ್ತೆ ಶಾಲಾವಧಿಯಲ್ಲಿ ವಿದ್ಯಾರ್ಥಿಗಳನ್ನು ಇಟ್ಟಕೊಂಡು ಪಾಠ ಮಾಡ್ತಿರುವ ಮಾಹಿತಿ ಶಿಕ್ಷಣ ಇಲಾಖೆ ಹತ್ತಿರ ಇದೆ ಎಂದು ಮೂಲಗಳು ತಿಳಿಸಿವೆ.
ಪಟ್ಟಣದಲ್ಲಂತೂ ಕೋಚಿಂಗ್ ಕೇಂದ್ರಗಳಲ್ಲಿ 3ನೇ ತರಗತಿಯಿಂದ 5ನೇ ತರಗತಿ ವರೆಗೆ ವಿಧ್ಯಾರ್ಥಿಗಳನ್ನು ಸೇರಿಸಿಕೊಳ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಾಡಿಸಿ ವಿದ್ಯಾರ್ಥಿಗಳನ್ನು ಈ ಅನಧಿಕೃತ ಕೋಚಿಂಗ್ ಕೇಂದ್ರಗಳಲ್ಲಿ ಪೋಷಕರೇ ಖುದ್ದು ವಾರ್ಷಿಕ ಹಣ ಸಂದಾಯ ಮಾಡಿ ತಮ್ಮ ಮಕ್ಕಳನ್ನು ಕಳಿಸಿರುವುದು ವಿಪರ್ಯಾಸದ ಸಂಗತಿ.
ಈ ಅನಧಿಕೃತ ಕೇಂದ್ರಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗರಿಷ್ಠವಾಗಿ ಕಂಡು ಬಂದರೂ ಮಕ್ಕಳ ಹಾಜರಾತಿ ಶೂನ್ಯವಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬುಡ ಮೇಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ವಿಷಯ ಇದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳುಎಚ್ಚೆತ್ತುಕೊಂಡುವಾರದೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಪ್ರತಿಭಟನೆ ನಡೆಸಲಾಗುದು ಎಂದು ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ అని.ల `ದೇವಕತ್ತೆ ಎಚ್ಚರಿಕೆ ನೀಡಿದ್ದಾರೆ
ಕರವೇ ತಾಲೂಕ ಅಧ್ಯಕ್ಷರು ಅನೀಲ ದೇವಕತ್ತೆ… ಕರವೇ ಗೌರವ ಅಧ್ಯಕ್ಷ ಬಸವರಾಜ ಶೆಟಕಾರ.. ಉಪಾಧ್ಯಕ್ಷರು ಪಪ್ಪು ಹಕ್ಕೇ..ಕಪಿಲ ಕಾಂಬಾಳೆ ..ರಾಹುಲ ..ಅರುಣಾ .ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು..
