04/07/2025 11:51 AM

Translate Language

Home » ಲೈವ್ ನ್ಯೂಸ್ » ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ.

Facebook
X
WhatsApp
Telegram

ಬೆಂಗಳೂರು.03.ಜುಲೈ.25:- ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಬಸ್ ಪಾಸ್ ಅನ್ನು ಈಗ ಅರೆಕಾಲಿಕ, ಸಂಪಾದಕರಿಗೂ ಮುಖ್ಯಸ್ಥರ ಶಿಫಾರಸ್ಸು ಪತ್ರ ನೀಡಿದ್ರೆ ವಿತರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಈ ಕುರಿತಂತೆ ತಿದ್ದುಪಡಿ ಆದೇಶವನ್ನು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ್ದಾರೆ.

ಅದರಲ್ಲಿ ಪೂರ್ಣಾವಧಿ, ಅರೆಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ ನೇಮಕಾತಿ ಪತ್ರ, ಸಂಪಾದಕರ, ಮುಖ್ಯಸ್ಥರ ಶಿಫಾರಸ್ಸು ಪತ್ರ, ಸಂಸ್ಥೆಯಿಂದ ಪಡೆಯುತ್ತಿರುವ ಲೈನೇಜ್, ಸಂಭಾವನೆ ಪಡೆಯುತ್ತಿರುವ ಬಗ್ಗೆ ಕಳೆದ 11 ತಿಂಗಳ ಅವಧಿಯ ಬ್ಯಾಂಕ್ ಖಾತೆಯ ವಿವರಗಳು, ಸಂಬಂಧಿತ ದಾಖಲೆಗಳನ್ನು ಒದಗಿಸಲು ಅವಕಾಶ ನೀಡಿದೆ‌.

ಅಂದಹಾಗೆ ಈ ಮೊದಲು ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಪೂರ್ಣಾವಧಿಯ ಪತ್ರಕರ್ತರು ಆಗಿರಬೇಕು ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈ ನಿಯಮದ ಕಾರಣ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೈತಪ್ಪುವ ಆತಂಕ ಎದುರಾಗಿತ್ತು. ಏಕೆಂದರೆ ಬಹುತೇಕ ಗ್ರಾಮೀಣ ಪತ್ರಕರ್ತರು ಪ್ರೀ ಲಾಸ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂರ್ಣಕಾಲಿಕ ವರದಿಗಾರರು ತಾಲೂಕಿನ ಮಟ್ಟದಲ್ಲಿ ಕಡಿಮೆ.

ಈಗ KUWJ ಅಧ್ಯಕ್ಷ ಶಿವಾನಂದ ತಗಡೂರ ಅವರ ಪರಿಶ್ರಮದಿಂದ ನಿಯಮ ಬದಲಾವಣೆ ಆಗಿದೆ ಹೀಗಾಗಿ ಬಹುತೇಕ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ದೊರೆಯುವಂತೆ ಆಗಲಿ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!