ಚಾಮರಾಜನಗರ.03.ಜುಲೈ.25:- ಮಹಿಳಾ ಮೀಸಲು ಸ್ಥಾನಗಳಿಗೆ ನಡೆಯಲಿದ್ದು.
ಜುಲೈ 16 ರಂದು ಕೆಸ್ತೂರು ಹಾಲು ಉತ್ಪಾದಕರ ಆಡಳಿತ ಮಂಡಳಿ ಚುನಾವಣೆ.
ಯಳಂದೂರು: ತಾಲ್ಲೂಕಿನ ಕೆಸ್ತೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಯಳಂದೂರು ತಾಲ್ಲೂಕು ಚಾಮರಾಜನಗರ ಜಿಲ್ಲೆ. ಈ ಸಂಘದ ಆಡಳಿತ ಮಂಡಳಿ ಚುನಾವಣೆಯು ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಎ ಮತ್ತು ಬಿ ಪ್ರವರ್ಗ ಹಾಗೂ
ಮಹಿಳಾ ಮೀಸಲು ಸ್ಥಾನಗಳಿಗೆ ನಡೆಯಲಿದ್ದು.
ದಿನಾಂಕ 07-07- 2025 ರಿಂದ 08-07-2025 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ದಿನಾಂಕ 09-07-2025 ರಂದು ಬೆಳಿಗ್ಗೆ 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ದಿನಾಂಕ 10-07-2025 ಮಧ್ಯಾಹ್ನ 3 ರೊಳಗೆ ನಾಮಪತ್ರ ವಾಪಸ್ಸು ಪಡೆಯಬಹುದಾಗಿದೆ.
ಅಗತ್ಯ ವಾದಲ್ಲಿ ದಿನಾಂಕ 16- 07-2025 ರಂದು ಬೆಳಿಗ್ಗೆ 10 ರಿಂದ 02 ರವರೆಗೆ ಸಂಘದ ಕಛೇರಿ, ಕೆಸ್ತೂರು ಯಳಂದೂರು ತಾಲ್ಲೂಕು ಇಲ್ಲಿ ಮತದಾನ ನಡೆಯಲಿದ್ದು, ನಂತರ ಸ್ಥಳದಲ್ಲೇ ಎಣಿಕೆ ನಡೆಯಿಲಿದೆ ಹೆಚ್ಚಿನ ವಿವರಗಳಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ರಿಟರ್ನಿಂಗ್ ಆಫೀಸರ್ ಹಾಗೂ ಯಳಂದೂರು ತಾಲ್ಲೂಕು ಸಹಕಾರ ಅಧಿಕಾರಿ ಸುಭಾಷಿಣಿ ಎಸ್ ರವರು ಪ್ರಕಟಣೆಯಲ್ಲಿ ತಿಳಿಸಿದರು
ವರದಿ: ಪ್ರಸನ್ನ ಕುಮಾರ ಕಿತ್ತೂರು