ಕೊಪ್ಪಳ.03.ಜುಲೈ.25:- ಎನ್.ಹೆಚ್.ಎಂ. ಯೋಜನೆಯಡಿ ಡಿಸಿಕ್ಯೂಎ ನ ಗುತ್ತಿಗೆ ಆಧಾರದ ಒಂದು ಹುದ್ದೆಗೆ ಸ್ವೀಕೃತಗೊಂಡ 68 ಅರ್ಜಿಗಳ ವಿವರಗಳನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ತಿರಸ್ಕೃತಗೊಂಡ ಹಾಗೂ ಅಂಗೀಕರಿಸಲ್ಪಟ್ಟ ಅರ್ಜಿಗಳ ವಿವರ ಮತ್ತು ತಾತ್ಕಾಲಿಕ ಆಯ್ಕೆಪಟ್ಟಿಯ ವಿವರಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯ ಪ್ರದರ್ಶನಾ ಫಲಕದಲ್ಲಿ ಹಾಗೂ ಕೊಪ್ಪಳ ಜಿಲ್ಲಾ ವೆಬ್ ತಾಣ www.koppal.nic.in ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಜುಲೈ 11 ರ ಸಾಯಂಕಾಲ 4 ಗಂಟೆಯೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ, ಕಛೇರಿ ಕೊಪ್ಪಳ ಇಲ್ಲಿಗೆ ಕಛೇರಿ ಸಮಯದಲ್ಲ್ಲಿ ಖುದ್ದಾಗಿ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನಂತರ ಬಂದ ಆಕ್ಷೇಪಣೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.