ಬೀದರ.01.ಜುಲೈ.25:- ರೋಟರಿ ಕ್ಲಬ ಬೀದರ ನ್ಯೂ ಸೆಂಚುರಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ನಿಗಮ ಬೀದರ ವಿಭಾಗದ ಸಹ ಭಾಗೀತ್ವದಲ್ಲಿ ಇತ್ತೀಚಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ ಘಟಕ-1ರಲ್ಲಿ ಹಮ್ಮಿಕೊಂಡಿದ್ದ “ಹೃದಯ ಶ್ವಾಸಕೋಶದ ಪುನರುಜ್ಜೀವನ ತುರ್ತು ಚಿಕಿತ್ಸೆ ಕಾರ್ಯಾಗಾರ” ಕ್ಕೆ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾoತ ಫುಲೇಕರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಡಾ.ಸಂಗಮೇಶ ಕುಣಕೇರಾ, ಡಾ.ಶ್ವೇತಾ ಕುಣಕೇರಾ, ಡಾ.ವೈಭವ ಭದಭದೆ, ಡಾ.ನಾಗೇಶ ಪಾಟೀಲ ಅವರುಗಳು ನೀಡಿದರು.
ಬೀದರ ವಿಭಾಗದ ಸಾರಿಗೆ ಅಧಿಕಾರಿಗಳು, ಘಟಕ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೊಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿವಕುಮಾರ ಪಾಕಲ, ಪ್ರಭು ತಟಪಟ್ಟಿ ಸೇರಿದಂತೆ ಇತರರು ಉಪಸ್ತಿತರಿದ್ದರು.